ಗದಗ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಕ್ಕೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, “ಆಡಳಿತದ ವೈಫಲ್ಯ ಮುಚ್ಚಿಡಲು ಖರ್ಗೆ ಬೇರೆಡೆ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ತಮ್ಮ ಇಲಾಖೆಯಲ್ಲಿ ಅಕ್ರಮಗಳಿರುವಾಗ ಬೇರೆ ಕಡೆ ಮೂಗು ತೋರಿಸುತ್ತಿದ್ದಾರೆ,” ಎಂದು ಟೀಕಿಸಿದರು.
“ಖರ್ಗೆ ಆರ್‌ಎಸ್‌ಎಸ್ ನಿಷೇಧದ ಪತ್ರ ಬರೆದ ತಕ್ಷಣ ಸಿಎಂ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಈ ಕ್ರಮ,” ಎಂದು ಪಾಟೀಲ ಆರೋಪಿಸಿದರು.
“ಆರ್‌ಎಸ್‌ಎಸ್ ದೇಶಭಕ್ತರ ಸಂಘಟನೆಯಾಗಿದ್ದು, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಕಾಲದಲ್ಲೂ ಬ್ಯಾನ್ ಮಾಡಲು ಆಗಲಿಲ್ಲ. ಇಂದಿನ ಸಚಿವರು ಯಾರು ಬ್ಯಾನ್ ಮಾಡೋದು?” ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆಗಳ ಕುರಿತು ಪಾಟೀಲ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, “ನಿನ್ನ ಜಿಲ್ಲೆಯಲ್ಲಿ ನಿನ್ನ ಸಂಬಂಧಿಕರ ಶಾಲೆಯಲ್ಲೇ ಸಂಘದ ಶತಮಾನೋತ್ಸವ ಕಾರ್ಯಕ್ರಮ ನಡೆದಿವೆ. ಸೂರ್ಯನ ಕಡೆ ಉಗುಳಿದರೆ ಮುಖಕ್ಕೆ ಬಿದ್ದಂತೆ ಖರ್ಗೆ ಹೇಳಿಕೆಗಳಿವೆ,” ಎಂದರು.
ಹಾಗೇ ಅವರು ಹಾಸ್ಯಾತ್ಮಕ ಶೈಲಿಯಲ್ಲಿ, “ನಿನಗೆ ತಾಕತ್ತು ಇದ್ರೆ, ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಿ ತೋರಿಸು,” ಎಂದು ಸವಾಲು ಹಾಕಿದರು.
ಇದೇ ಸಂದರ್ಭದಲ್ಲಿ ಪಾಟೀಲ ಅವರು ಯತ್ನಾಳರ ಪರ ನಿಂತು, “ಯತ್ನಾಳ ಇತ್ತೀಚೆಗೆ ಸಾಫ್ಟ್ ಆಗಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಮಾತನಾಡುವುದನ್ನು ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ,” ಎಂದರು.
ಹಿಂದೂಸ್ತಾನ್ ಸಮಾಚಾರ್ / lalita MP