ಸಿಡ್ನಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನವೆಂಬರ್ 21ರಿಂದ ಪರ್ಥ್‌ನಲ್ಲಿ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಟದ ಸಾಧ್ಯತೆಗಳು “ಕಡಿಮೆ” ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಬೆನ್ನು ಮೂಳೆ ಮುರಿತದಿಂದ ಬಳಲುತ್ತಿದ್ದ ಕಮ್ಮಿನ್ಸ್ ಜುಲೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಬೌಲಿಂಗ್ ಮಾಡಿಲ್ಲ. “ಮೊದಲ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ, ಆದರೆ ಇನ್ನೂ ಸಮಯ ಇದೆ. ಎರಡು ವಾರಗಳಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಪ್ರಾರಂಭಿಸುತ್ತೇನೆ,” ಎಂದು ಅವರು ಫಾಕ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಪ್ರಕಾರ, ಕಮ್ಮಿನ್ಸ್ ಲಭ್ಯತೆಯ ಕುರಿತು ಶುಕ್ರವಾರದೊಳಗೆ ನಿರ್ಧಾರ ಕೈಗೊಳ್ಳಲಾಗುವುದು. ಅವರು ಮೊದಲ ಟೆಸ್ಟ್ ತಪ್ಪಿಸಿಕೊಂಡರೂ, ಸರಣಿಯ ಮಧ್ಯದಲ್ಲಿ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa