ರಾಯಚೂರು, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಿಎಮ್‍ಶ್ರೀ ನವೋದಯ ವಿದ್ಯಾಲಯದಿಂದ 9 ಹಾಗೂ 11ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ಅವಧಿ ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿದೆ.
9ನೇ ತರಗತಿ ಪ್ರವೇಶಕ್ಕೆ 8ನೇ ತರಗತಿ ಓದುತ್ತಿರುವ ಹಾಗೂ 11 ತರಗತಿ ಪ್ರವೇಶಕ್ಕೆ 10ನೇ ತರಗತಿ ಓದುತ್ತಿರುವ ಆಸಕ್ತರು ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ವೆಬ್‍ಸೈಟ್ ವಿಳಾಸ: https://cbseitms.rcil.gov.in/nvs11 & www.navodaya.gov.in ನಲ್ಲಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7204109046, 7899009900. 9703473495ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಮುದಗಲ್ ಪಿಎಮ್‍ಶ್ರೀ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್