ಬಳ್ಳಾರಿ : `ನಾನು ವಿಜ್ಞಾನಿ-2025'ರಲ್ಲಿ ಏಳು ವಿದ್ಯಾರ್ಥಿಗಳ ರೆಕಾರ್ಡ್
ಬಳ್ಳಾರಿ, 12 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಏರ್ಪಡಿಸಿದ್ದ `ನಾನು ವಿಜ್ಞಾನಿ - 2025'' ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿಯಲ್ಲಿ ಭಾಗವಹಿಸಿದ್ದ ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಶಾಲೆಗಳ ಐವರು ವಿದ್ಯಾರ್ಥ
ಬಳ್ಳಾರಿ : `ನಾನು ವಿಜ್ಞಾನಿ-2025'ರಲ್ಲಿ ಏಳು ವಿದ್ಯಾರ್ಥಿಗಳ ರೆಕಾರ್ಡ್


ಬಳ್ಳಾರಿ : `ನಾನು ವಿಜ್ಞಾನಿ-2025'ರಲ್ಲಿ ಏಳು ವಿದ್ಯಾರ್ಥಿಗಳ ರೆಕಾರ್ಡ್


ಬಳ್ಳಾರಿ, 12 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಏರ್ಪಡಿಸಿದ್ದ `ನಾನು ವಿಜ್ಞಾನಿ - 2025' ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿಯಲ್ಲಿ ಭಾಗವಹಿಸಿದ್ದ ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಶಾಲೆಗಳ ಐವರು ವಿದ್ಯಾರ್ಥಿಗಳು, ಜ್ಞಾನಾಮೃತ ಪ್ರೌಢಶಾಲೆಯ ಒಬ್ಬ ಮತ್ತು ನಂದ ರೆಸಿಡೆನ್ಸಿ ಶಾಲೆಯ ಒಬ್ಬ ವಿದ್ಯಾರ್ಥಿ ಸೇರಿ 7 ವಿದ್ಯಾರ್ಥಿಗಳು ಪ್ರತಿಷ್ಠಿತ `ವಲ್ರ್ಡ್ ಆರ್ಫ ರೆಕಾಡ್ರ್ಸ್, ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್'ನಲ್ಲಿ ಸ್ಥಾನ ಪಡೆದಿದ್ದಾರೆ.

ಈ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳಾದ ಶಿವಕುಮಾರ, ವಿದ್ಯಾಸಾಗರ, ದೇವರಾಜ, ಜಿ. ಸಂಜೇವ ಶೆಟ್ಟಿ, ಕುಮಾರಿ ಜಾನ್ಹವಿ .ಬಿ.ಎಸ್. ಮೊಹಮದ್ ಸೋಹಿಲ್ ಮತ್ತು ಗವಿಸಿದ್ದ ಅವರಾಗಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಚ್.ಎಂ. ಚನ್ನಬಸವಸ್ವಾಮಿ ಅವರು, `ನಾನು ವಿಜ್ಞಾನಿ - 2025'ರಲ್ಲಿ ಪಾಲ್ಗೊಂಡು ಯಶಸ್ಸಿಗೆ ಅನೇಕರು ಶ್ರಮಿಸಿದ್ದಾರೆ. ವಿಶೇಷವಾದ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಎಲ್ಲರಿಗೂ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande