ನಾಳೆ ಪ್ರತಿಗಂಧರ್ವ ನೂತನ ನಾಟಕ ಕಥಾಪೂಜೆ
ದಾವಣಗೆರೆ, 12 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ವತಿಯಿಂದ ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರತಿಗಂಧರ್ವ ನೂತನ ನಾಟಕ ಕಥಾಪೂಜೆ(ಕಲಾವಿದರಿಗೆ ತರಬೇತಿ ಆರಂಭ) ಕಾರ್ಯಕ್ರಮವನ್ನು ಆಯ
ನಾಳೆ ಪ್ರತಿಗಂಧರ್ವ ನೂತನ ನಾಟಕ ಕಥಾಪೂಜೆ


ದಾವಣಗೆರೆ, 12 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ವತಿಯಿಂದ ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರತಿಗಂಧರ್ವ ನೂತನ ನಾಟಕ ಕಥಾಪೂಜೆ(ಕಲಾವಿದರಿಗೆ ತರಬೇತಿ ಆರಂಭ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡ. ಸತೀಶ ಕುಮಾರ ಪಿ ವಲ್ಲೇಪುರೆ ಉದ್ಘಾಟಿಸುವರು. ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ ನಾಗರಾಜಮೂರ್ತಿ, ಕರ್ನಾಟಕ ರಂಗಸಮಾಜದ ಸದಸ್ಯರಾದ ಡಾ.ಕೆ ರಾಮಕೃಷ್ಣಯ್ಯ, ನಾಟಕಕಾರರಾದ ಡಾ.ರಾಜಪ್ಪ ದಳವಾಯಿ, ರಂಗ ನಿರ್ದೇಶಕರಾದ ಮಾಲತೇಶ ಬಡಿಗೇರ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande