ಬೀದರ್, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅತಿವೃಷ್ಟಿಯಿಂದ ಬೀದರ ಜಿಲ್ಲೆಯಾದ್ಯಂತ ಸಂಭವಿಸಿದ ಬೆಳೆಗಳು, ರಸ್ತೆ ಮತ್ತು ಸೇತುವೆಗಳಿಗೆ ಹಾನಿ ಸಂಭವಿಸಿರುವ ಕುರಿತು ಭಾಲ್ಕಿ ತಾಲೂಕಿನ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು,ಈಗಾಗಲೇ ಆಗಸ್ಟ್ ತಿಂಗಳ ಹಾನಿ ಸಮೀಕ್ಷಾ ವರದಿ ಬಂದಿದೆ. ಇನ್ನೂ 2–3 ದಿನಗಳಲ್ಲಿ ಸೆಪ್ಟೆಂಬರ್ ತಿಂಗಳ ಸಮೀಕ್ಷಾ ವರದಿ ಸಹ ಲಭ್ಯವಾಗಲಿದೆ.
ಸಂಪೂರ್ಣ ವರದಿ ಬಂದ ತಕ್ಷಣ, ದೀಪಾವಳಿ ಒಳಗಾಗಿ ಬೀದರ ಜಿಲ್ಲೆಯ ಎಲ್ಲಾ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ತಕ್ಷಣ ಒದಗಿಸಲಾಗುವುದು. ಜೊತೆಗೆ ರಸ್ತೆ ಹಾನಿ ಹಾಗೂ ಸೇತುವೆ ಕುಸಿತ ಸ್ಥಳಗಳಲ್ಲಿ ತುರ್ತು ಮರು ನಿರ್ಮಾಣ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa