ವಿಜಯಪುರ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕ ಸ್ಥಳಗಳಲ್ಲಿ ಆರ್.ಎಸ್.ಎಸ್ ಕಾರ್ಯಚಟುವಟಿಕೆ ನಿಷೇಧಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ವಿಚಾರಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟ್ವಿಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇದು ಬೌದ್ಧಿಕ ದಿವಾಳಿತನ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಗುಡುಗಿದ್ದಾರೆ. ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳಲ್ಲಿ ಸಹಾಯಕ್ಕೆ ನಿಲ್ಲೋದು ಇದೆ ಆರ್.ಎಸ್.ಎಸ್ ರಾಷ್ಟ್ರಪ್ರೇಮ, ದೇಶಭಕ್ತಿ, ಶಿಸ್ತಿಗೆ ಮತ್ತೊಂದು ಹೆಸರು ಆರ್.ಎಸ್.ಎಸ್ ಪ್ರತಿಫಲದ ಆಸೆ ಇಲ್ಲದೆ ಆರ್.ಎಸ್.ಎಸ್ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಸಂಘದ ನಿಷೇಧ ಯಾರಿಂದಲೂ ಸಾಧ್ಯವಿಲ್ಲ. ಪ್ರಿಯಾಂಕ ಖರ್ಗೆ ರಾಜಕೀಯ ಪ್ರೇರಿತ ಹೇಳಿಕೆ ನಿಲ್ಲಿಸಲಿ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಡಲಿ. ನಿಷೇಧ ಮಾಡೋದಿದ್ದರೇ ಎಸ್‌ಡಿಪಿಐ ದೇಶದ್ರೋಹಿ ಸಂಘಟನೆ ನಿಷೇಧಿಸಲಿ. ಅನ್ಯಕೋಮಿನ ಹಬ್ಬಗಳ ದಿನ ತಲವಾರ್ ಹಿಡಿದು, ಹೆಲ್ಮೆಟ್ ಧರಿಸದೆ ಓಡಾಡುವ ಪುಂಡರ ಹೆಡೆಮುರಿ ಕಟ್ಟಲಿ. ಬಕ್ರೀದ್ ಇತರೆ ಹಬ್ಬಗಳ ಪ್ರಾಣಿ ಬಲಿ ನಿಷೇಧಿಸಲಿ. ಗಣಿತ, ವಿಜ್ಞಾನ, ಆಂಗ್ಲ ಹೇಳಿಕೊಡದೆ, ಧರ್ಮದ ಬಗ್ಗೆ ತಪ್ಪು ಕಲ್ಪನೆ ನೀಡುವ ಮದರಸಾ ನಿಷೇಧಿಸಲಿ ಎಂದ ಯತ್ನಾಳ್ ಕಿಡಿಕಾರಿದ್ದಾರೆ. ಕಲಬುರ್ಗಿ ಜಿಲ್ಲೆಯನ್ನ ಅಭಿವೃದ್ಧಿ ಮಾಡಿ ಮಾದರಿ ಜಿಲ್ಲೆ ಮಾಡಲಿ ಎಂದು ಯತ್ನಾಳ ಸವಾಲು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande