ಮರಿಯಮ್ಮನಹಳ್ಳಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಡತನದ ಬೇಗೆಯಲ್ಲಿಯೇ ಅನೇಕ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲುಗಳನ್ನೇರಿ ಸಾಧಕರಾಗಿ ಪ್ರಕಟವಾಗುತ್ತಿರುವುದು ವಿಶೇಷ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕಳಾಗಿ ಕೆಲಸ ಮಾಡುತ್ತಾ, ನಾಲ್ಕು ಜನ ಮಕ್ಕಳನ್ನು ಸಾಕಿದ ಪದ್ಮಾವತಿ (ಪದ್ಮಮ್ಮ) ಅವರ ಕೊನೆಯ ಪುತ್ರ ಎಚ್. ಉಮೇಶ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ನಾಟಕ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದು, ತನ್ನೆಲ್ಲಾ ಸಾಧನೆಯನ್ನು ತಾಯಿಗೆ ಅರ್ಪಣೆ ಮಾಡಿ, ಆಕೆಯ ತ್ಯಾಗ, ಶ್ರಮಕ್ಕೆ ಗೌರವ ಸಲ್ಲಿಸಿದ್ದಾನೆ. ಈ ಮೂಲಕ ಎಚ್. ಉಮೇಶ್ ಮರಿಯಮ್ಮನಹಳ್ಳಿಯ ಎಲ್ಲರ ಗಮನ ಸೆಳೆದಿದ್ದು, ನಾಡಿನ ಅನೇಕರ ಮನಸೂರೆಗೊಂಡಿದ್ದಾನೆ.
ಎಚ್. ಉಮೇಶ್ 1 ಮತ್ತು 2ನೇ ತಗತಿಯನ್ನು ಮರಿಯಮ್ಮನಹಳ್ಳಿಯಲ್ಲಿ ಓದಿದ್ದು, 3 ರಿಂದ 7ನೇ ತರಗತಿಯವರೆಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಓದಿದ್ದಾನೆ.
ಸಿದ್ದಗಂಗಾ ಮಠದಲ್ಲಿನ ಸಂಸ್ಕಾರ, ವಿದ್ಯಾಭ್ಯಾಸ ಆತನನನ್ನು ಬಂಗಾರದ ಪದಕ ಪುರಸ್ಕøತನಾಗುವವರೆಗೂ ಕೊಂಡೊಯ್ದಿದೆ ಎಂದರೂ ತಪ್ಪಾಗುವುದಿಲ್ಲ. 2021ರಲ್ಲಿ ಹೆಗ್ಗೋಡಿನ ನಿನಾಸಂನಲ್ಲಿ ರಂಗ ಶಿಕ್ಷಣವನ್ನು ಪಡೆದುಕೊಂಡರು.
ಎಚ್. ಉಮೇಶ್ ಅವರು ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡುವ ಜೊತೆಗೆ ಹೆಗ್ಗೋಡಿನ ನೀನಾಸಂನಲ್ಲಿ ಪಡೆದ ರಂಗಶಿಕ್ಷಣದ ಅನುಭವನದ ಜೊತೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ನಾಟಕ ಸ್ನಾತಕೋತ್ತರ ಪದವಿಗೆ ಸೇರಿ 2024-25 ಎಂ.ಎ. ನಾಟಕ ಅಂತಿಮ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳಿಗೆ ನೀಡುವ ದಿವಂಗತ ಎನ್. ರಾಮರಾವ್ ಸ್ಮರಣಾರ್ಥ ಚಿನ್ನದ ಪದಕ ಹಾಗೂ ಉತ್ತಮ ಅಭಿನಯಕ್ಕೆ ಹಾಗೂ ಕರಕೌಶಲ್ಯಕ್ಕೆ ಕೊಡಲಾಗುವ ಎಂ.ಎಲ್.ಎಸ್. ಶಾಸ್ತ್ರಿ ಸ್ಮಾರಕ ಚಿನ್ನದ ಪದಕ ಹಾಗೂ ರವಿ ಆರ್ಟಿಸ್ಟ್ ಜುಬ್ಲಿ ಹಾಗೂ ವಿ.ವಿ.ಯಿಂದ ಕೊಡುವ 1 ಚಿನ್ನದ ಪದಕವನ್ನು ಪಡೆದಿದ್ದಾನೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್