ಉಕ್ರೇನ್‌ನಲ್ಲಿ ಸೈನಿಕರ ನಿಯೋಜನೆ ; ಅಮೆರಿಕದ ಆರೋಪ ತಿರಸ್ಕರಿಸಿದ ಕ್ಯೂಬಾ
ಹವಾನಾ, 12 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉಕ್ರೇನ್‌ನಲ್ಲಿ ಕ್ಯೂಬನ್ ಪಡೆಗಳು ಹೋರಾಟ ನಡೆಸುತ್ತಿವೆ ಎಂಬ ಅಮೆರಿಕದ ಆರೋಪಗಳನ್ನು ಕ್ಯೂಬಾ ಸರ್ಕಾರ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಶನಿವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ, ಕ್ಯೂಬಾದ ವಿದೇಶಾಂಗ ಸಚಿವಾಲಯವು ಈ ಆರೋಪಗಳನ್ನು “ಆಧಾರರಹಿತ ಹಾಗೂ
ಉಕ್ರೇನ್‌ನಲ್ಲಿ ಸೈನಿಕರ ನಿಯೋಜನೆ ; ಅಮೆರಿಕದ ಆರೋಪ ತಿರಸ್ಕರಿಸಿದ ಕ್ಯೂಬಾ


ಹವಾನಾ, 12 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉಕ್ರೇನ್‌ನಲ್ಲಿ ಕ್ಯೂಬನ್ ಪಡೆಗಳು ಹೋರಾಟ ನಡೆಸುತ್ತಿವೆ ಎಂಬ ಅಮೆರಿಕದ ಆರೋಪಗಳನ್ನು ಕ್ಯೂಬಾ ಸರ್ಕಾರ ಸಂಪೂರ್ಣವಾಗಿ ತಳ್ಳಿ ಹಾಕಿದೆ.

ಶನಿವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ, ಕ್ಯೂಬಾದ ವಿದೇಶಾಂಗ ಸಚಿವಾಲಯವು ಈ ಆರೋಪಗಳನ್ನು “ಆಧಾರರಹಿತ ಹಾಗೂ ರಾಜಕೀಯ ಉದ್ದೇಶಿತ” ಎಂದು ಹೇಳಿದೆ.

ಸಚಿವಾಲಯದ ಹೇಳಿಕೆಯ ಪ್ರಕಾರ, 2023 ರಿಂದ 2025ರ ಅವಧಿಯಲ್ಲಿ ಉಕ್ರೇನ್ ಯುದ್ಧದಲ್ಲಿ ಕೂಲಿ ಸೈನಿಕರಾಗಿ ಭಾಗವಹಿಸಿದ ಆರೋಪದ ಮೇಲೆ 40 ಕ್ಯೂಬನ್ ನಾಗರಿಕರ ವಿರುದ್ಧ ಒಂಬತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಎಂಟು ಪ್ರಕರಣಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, 26 ಮಂದಿಗೆ 5ರಿಂದ 14 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗಿದೆ. ಒಂದು ಪ್ರಕರಣ ವಿಚಾರಣೆಗೆ ಬಾಕಿ ಇರುವುದು ಹಾಗೂ ಮೂರು ಪ್ರಕರಣಗಳಲ್ಲಿ ತೀರ್ಪು ನಿರೀಕ್ಷೆಯಲ್ಲಿವೆ.

“ಕ್ಯೂಬಾ ಯಾವುದೇ ವಿದೇಶಿ ಯುದ್ಧ ಅಥವಾ ಸಶಸ್ತ್ರ ಸಂಘರ್ಷದಲ್ಲಿ ಭಾಗವಹಿಸುತ್ತಿಲ್ಲ. ನಮ್ಮ ದೇಶದ ನೀತಿ ಸ್ಪಷ್ಟವಾಗಿದೆ — ಬೇರೆ ದೇಶಗಳಲ್ಲಿ ಕೂಲಿ ಸೈನಿಕರಾಗಿ ಪಾಲ್ಗೊಳ್ಳುವುದನ್ನು ನಾವು ಸಹಿಸುವುದಿಲ್ಲ,” ಎಂದು ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.

ಇತ್ತೀಚೆಗಷ್ಟೇ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಟಿಸಿದ ರಾಜತಾಂತ್ರಿಕ ಟಿಪ್ಪಣಿಯಲ್ಲಿ, ಉಕ್ರೇನ್‌ನಲ್ಲಿ ರಷ್ಯಾದ ಪರವಾಗಿ 1,000ರಿಂದ 5,000 ಕ್ಯೂಬನ್ ಸೈನಿಕರು ಹೋರಾಡುತ್ತಿರುವುದಾಗಿ ಆರೋಪ ಮಾಡಲಾಗಿತ್ತು. ಈ ಕುರಿತು ಕ್ಯೂಬಾ “ಇದು ನಿಜಕ್ಕೂ ನಿರಾಧಾರ ಹೇಳಿಕೆ” ಎಂದು ತಿರಸ್ಕರಿಸಿ, “ಯುಎನ್ ಶಾಂತಿ ಮಾತುಕತೆಗಳನ್ನು ಹಾಗೂ ಜಾಗತಿಕ ಭದ್ರತಾ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಸ್ಪಷ್ಟಪಡಿಸಿದೆ.

ಈ ನಡುವೆ, ಅಮೆರಿಕದ ದಶಕಗಳಷ್ಟು ಹಳೆಯದಾದ ಆರ್ಥಿಕ ನಿರ್ಬಂಧವನ್ನು ಕೊನೆಗೊಳಿಸಲು ಬದ್ಧವಲ್ಲದ ನಿರ್ಣಯದ ಮೇಲೆ ಈ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ ಚಲಾಯಿಸಲಿದೆ. ಕಳೆದ ವರ್ಷ ಇದೇ ನಿರ್ಣಯಕ್ಕೆ 187 ದೇಶಗಳು ಪರವಾಗಿ ಮತ ಚಲಾಯಿಸಿದ್ದರೆ, ಅಮೆರಿಕ ಮತ್ತು ಇಸ್ರೇಲ್ ಮಾತ್ರ ವಿರೋಧಿಸಿದವು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande