ಪಾಲಾರ್ ನದಿಗೆ ಬಾಗಿನ ಅರ್ಪಿಸಿದ ಶಾಸಕಿ ರೂಪಕಲಾ
ಪಾಲಾರ್ ನದಿಗೆ ಬಾಗಿನ ಅರ್ಪಿಸಿದ: ಶಾಸಕಿ ರೂಪಕಲಾ ಅಕ್ಟೋಬರ್
ಚಿತ್ರ : ಬೇತಮಂಗಲ ಪಾಲಾರ್ ನದಿಯು ತುಂಬಿ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಬಾಗಿನ ಅರ್ಪಿಸಿದರು.


ಕೋಲಾರ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಬೇತಮಂಗಲ ಪಾಲಾರ್ ನದಿಯು ತುಂಬಿ ಶುಕ್ರವಾರ ಸಾಂಪ್ರದಾಯವಾಗಿ ಕೋಡಿ ಹರಿದಿದ್ದ ಹಿನ್ನಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಶನಿವಾರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಬೇತಮಂಗಲ ಗ್ರಾಮದ ಪಾಲಾರ್ ನದಿಯ ದಡದಲ್ಲಿ ನೆಲೆಸಿರುವ ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಾಲಾರ್ ನದಿಯ ದಡದಲ್ಲಿ ಸಂಪ್ರದಾಯ ಬದ್ಧವಾಗಿ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು.

ಈ ವೇಳೆ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಪುರಾತನ ಕಾಲದ ಸಾವಿರಾರು ಎಕರೆ ವಿಸ್ತೀರ್ಣ ಉಲ್ಲ ಪಾಲಾರ್ ನದಿಯು ತುಂಬಿಕೋಡಿ ಹರಿಯುತ್ತಿರುವುದು ನೋಡುವುದಕ್ಕೆ ಕಣ್ಣಿಗೆ ಸೊಗಸಾಗಿ ಕಾಣುತ್ತಿದೆ. ಪ್ರವಾಸ ತಾಣವಾಗಿ ಮಾರ್ಪಟ್ಟಿದೆ: ಬೇತಮಂಗಲ ಪಾಲಾರ್ ನದಿಯು ತುಂಬಿಕೊಂಡಿರುವುದರಿಂದ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಬೇತಮಂಗಲ ಸೇರಿದಂತೆ ಕೆಜಿಎಫ್ ಹಾಗೂ ಇತರೆ ಕಡೆಗಳಿಂದ ಜನರು ಕೋಡಿಯನ್ನು ನೋಡಲು ತೆರಳಿ ಬರುತ್ತಿದ್ದಾರೆ.

ಸಾರ್ವಜನಿಕರು ಎಚ್ಚರವಹಿಸಿ : ಕೆರೆಯನ್ನು ನೋಡಲು ವಿವಿಧ ಕಡೆಯಿಂದ ಬರುವಂತಹ ಸಾರ್ವಜನಿಕರು ದೂರದಿಂದ ನೋಡಿ ಆನಂದಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಲಕ್ಷ್ಮೀನಾರಾಯಣ್, ಇಓ ವೆಂಕಟೇಶ್, ವೃತ್ತ ನಿರೀಕ್ಷಕ ರಂಗಶಾಮಯ್ಯ, ಗ್ರಾಪಂ ಅಧ್ಯಕ್ಷರಾದ ವಿನೂ ಕಾರ್ತಿಕ್, ಅಯ್ಯಪಲ್ಲಿ ಮಂಜುನಾಥ್, ಹಂಗಳ ರಮೇಶ್, ರಾಮಸಾಗರ ಗ್ರಾಪಂ ಅಧ್ಯಕ್ಷ ಎಂ.ಸಿ.ಚಂದ್ರಪ್ಪ, ಪಿಡಿಒ ವಸಂತ್ ಕುಮಾರ್, ಮುಖಂಡರಾದ ಕಮ್ಮಸಂದ್ರ ನಾಗರಾಜ್, ಸುರೇಂದ್ರ ಗೌಡ, ರಾಮಚಂದ್ರಪ್ಪ, ನಲ್ಲೂರು ಶಂಕರ್, ವಿಜೇಂದ್ರ, ರಾಮಕೃಷ್ಣ ರೆಡ್ಡಿ, ಚಂದ್ರ ಕಾಂತ್, ಭಾರ್ಗವ್ ರಾಮ್, ರಾಮಕೃಷ್ಣಪ್ಪ, ಎಂಬಿಎ ಕೃಷ್ಣಪ್ಪ, ಕಾರಿ ಪ್ರಸನ್ನ, ಕೆ.ಎಂ.ಕೃಷ್ಣ ಮೂರ್ತಿ, ಮುನೇಗೌಡ, ರಾಜಣ್ಣ, ವಿಶ್ವನಾಥ್, ನಾರಾಯಣ ಸ್ವಾಮಿ, ವೇಣುಗೋಪಾಲ, ವೆಂಕಟೇಶ್, ಪಾಪಣ್ಣ, ಶಿವ, ಬ್ಯಾಟೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಚಿತ್ರ : ಬೇತಮಂಗಲ ಪಾಲಾರ್ ನದಿಯು ತುಂಬಿ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಬಾಗಿನ ಅರ್ಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande