ಹಾವೇರಿ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಕಾಂಗ್ರೆಸ್ ನಲ್ಲಿನ ಅಧಿಕಾರ ಹಂಚಿಕೆಯ ಆಂತರಿಕ ಗೊಂದಲದಿಂದ ರಾಜ್ಯದ ಆಡಳಿತ ಕುಂಠಿತ ವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟತೆ ಇಲ್ಲದಿರುವುದರಿಂದ ರಾಜ್ಯದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ಅಧಿಕಾರ ಹಸ್ತಾಂತರ, ಹಂಚಿಕೆ ಮೊದಲನೇ ದಿನದಿಂದ ಇದೆ. ಯಾವ ಹೈಕಮಾಂಡ್ ಹೇಳಿದರು ಅಷ್ಟೇ, ಲೋ ಕಮಾಂಡ್ ಹೇಳಿದರು ಅಷ್ಟೇ. ಯಾವುದು ಕೂಡಾ ನಿಂತಿಲ್ಲ. ಮುಖ್ಯಮಂತ್ರಿ ಕಡೆಯವರು ಅವರೇ 5 ವರ್ಷ ಮುಂದುವರೆಯುತ್ತಾರೆ ಅಂತಾರೆ. ಡಿ.ಕೆ. ಶಿವಕುಮಾರ್ ಕಡೆಯವರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಅಂತಾರೆ. ನನಗೆ ಅನಿಸುತ್ತದೆ ಹೈಕಮಾಂಡ್ ಇದರಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಅಲ್ಲಿಯೂ ಎರಡು ಗುಂಪು ಆಗಿವೆ. ಹೀಗಾಗಿ ಹೈಕಮಾಂಡ್ ಪುಲ್ ಸ್ಟಾಪ್ ಇಡಲು ಆಗುತ್ತಿಲ್ಲ. ಒಂದು ಗುಂಪು ಮುಖ್ಯಮಂತ್ರಿಗೆ ಸಪೋರ್ಟ್ ಮಾಡುತ್ತದೆ. ಇನ್ನೊಂದು ಗುಂಪು ಡಿ.ಕೆ. ಶಿವಕುಮಾರ್ ಗೆ ಸಪೋರ್ಟ್ ಮಾಡುತ್ತಿದೆ. ಸಮಸ್ಯೆ ಇರೋದು ಅಲ್ಲಿ. ಇದು ಅವರ ಆಂತರಿಕ ಸಮಸ್ಯೆ. ಇವರ ಆಂತರಿಕ ಸಮಸ್ಯೆಯಿಂದ ರಾಜ್ಯದ ಆಡಳಿತ ಸ್ಥಗಿತವಾಗಿದೆ. ಕರ್ನಾಟಕ ಜನರು ಸಪರ್ ಆಗುತ್ತಿದ್ದಾರೆ. ಇದನ್ನು ಸುದೀರ್ಘವಾಗಿ ವಿಶ್ಲೇಷಣೆ ಮಾಡಿದರೆ ಮುಂದೆ ಏನಾಗುತ್ತೆ ಅನ್ನೋ ಪ್ರಶ್ನೆಗೆ ಇದ್ದಕ್ಕೆಲ್ಲಾ ಉತ್ತರ ಕೊಡಬೇಕಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.
ಸಿದ್ದರಾಮಯ್ಯ ನವರ ಮೊದಲಿನ ಹಿನ್ನಲೆ ನೋಡಿದಾಗ ಅವರು ತಮಗೆ ಅಧಿಕಾರ ವಂಚನೆಯಾದಾಗ ಸಿಡಿದೇಳುವ ರೆಬೆಲಿಯನ್ ವ್ಯಕ್ತಿತ್ವ ಗಟ್ಟಿಯಾಗಿದಿಯೋ ಅಥವಾ ಹೊಂದಾಣಿಕೆ ಸಿದ್ದರಾಮಯ್ಯ ಇದ್ದಾರೋ ನೋಡಬೇಕು ? ಹೈಕಮಾಂಡ್ ಎಷ್ಟು ಬಲಿಷ್ಠವಾಗಿದೆ ಅನ್ನುವುದರ ಮೇಲೆ ಬದಲಾವಣೆ ನಡೆಯುವುದು ತಿಳಿಯಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa