ನವೆಂಬರ್‌ನಲ್ಲಿ, ಸರ್ಕಾರದಲ್ಲಿ ಕ್ರಾಂತಿ ಖಚಿತ : ಬಿ. ಶ್ರೀರಾಮುಲು
ಗದಗ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ನವೆಂಬರ್ ತಿಂಗಳು ಮಹತ್ವದ ತಿರುವು ತಾಳಲಿದೆ ಎಂಬ ಶಂಕೆ-ಸಂದೇಹಗಳ ನಡುವೆ, ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಅವರು ತೀವ್ರ ವ್ಯಂಗ್ಯ ಮಾಡಿದ್ದಾರೆ. “ಜನವರಿಯಲ್ಲಿ ಸಂಕ್ರಾಂತಿ ಆಗುತ್ತೋ ಗೊತ್ತಿಲ್ಲ, ಆದರೆ ನವೆಂಬರ
ಪೋಟೋ


ಗದಗ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ನವೆಂಬರ್ ತಿಂಗಳು ಮಹತ್ವದ ತಿರುವು ತಾಳಲಿದೆ ಎಂಬ ಶಂಕೆ-ಸಂದೇಹಗಳ ನಡುವೆ, ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಅವರು ತೀವ್ರ ವ್ಯಂಗ್ಯ ಮಾಡಿದ್ದಾರೆ. “ಜನವರಿಯಲ್ಲಿ ಸಂಕ್ರಾಂತಿ ಆಗುತ್ತೋ ಗೊತ್ತಿಲ್ಲ, ಆದರೆ ನವೆಂಬರ್‌ನಲ್ಲಿ ಕ್ರಾಂತಿ ಆಗೋದು ನೂರಕ್ಕೆ ನೂರು ಖಚಿತ” ಎಂದು ಅವರು ಕಟು ಟೀಕೆ ಮಾಡಿದ್ದಾರೆ.

ಗದಗ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀರಾಮುಲು, “ಕಾಂಗ್ರೆಸ್ ನಾಯಕರು ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಅಂತ ಹೇಳ್ತಿದ್ದಾರೆ. ಆದರೆ ನಾವಂತು ಯಾವ ಕ್ರಾಂತಿ ಅಂತ ಗೊತ್ತಿಲ್ಲ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತೋ ನೋಡೋಣ,” ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಗುರಿಯಾಗಿಸಿಕೊಂಡ ಶ್ರೀರಾಮುಲು, “ಸಿಎಂ ಕುರ್ಚಿ ಖಾಲಿಯಾಗೋದು ಗ್ಯಾರಂಟಿ. ಶಾಸಕರಿಗೆ ಗೌರವ ಕೊಡೋದಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ, ಕವಡೆ ಕಾಸಿನ ಕಿಮ್ಮತ್ತು ಕೊಡೋದಿಲ್ಲ ಎಂದು ಅವರದೇ ಶಾಸಕರು ಹೇಳ್ತಿದ್ದಾರೆ. ರಾಜಕಾರಣದಲ್ಲಿ ಗೌರವ ಅತೀ ಮುಖ್ಯ,” ಎಂದು ಟೀಕಿಸಿದರು.

ಇತ್ತೀಚಿನ ಔತಣಕೂಟ ರಾಜಕೀಯವನ್ನು ಉಲ್ಲೇಖಿಸಿ, “ಈಗ ಸಿಎಂ ಅವರಿಗೆ ದಿಢೀರ್ ಶಾಸಕರ ಮೇಲೆ ಪ್ರೀತಿ ಬಂದಿದೆ. ನವೆಂಬರ್‌ನಲ್ಲಿ ಕ್ರಾಂತಿ ಅಂತಾ ಮಾತನಾಡುತ್ತಿದ್ದಂತೆ ಸಿಎಮ್ ಶಾಸಕರಿಗೆ ಔತಣಕೂಟಕ್ಕೆ ಬರಬೇಕೆಂದು ಆದೇಶ ಮಾಡಿದ್ದಾರೆ. ಯಾರಾದರೂ ಬರದಿದ್ದರೆ, ಸಚಿವ ಸಂಪುಟದಿಂದ ತೆಗೆದು ಹಾಕುತ್ತೇನೆ ಅಂತ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ,” ಎಂದು ಆರೋಪಿಸಿದರು.

“ಒಟ್ಟಾರೆ ನವೆಂಬರ್‌ನಲ್ಲಿ ಕ್ರಾಂತಿ ಖಚಿತ – ಜನವರಿಯಲ್ಲಿ ಸಂಕ್ರಾಂತಿ ಖಚಿತ!” ಎಂದು ತಮ್ಮ ಶೈಲಿಯಲ್ಲಿ ವ್ಯಂಗ್ಯವಾಡಿ, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ತುತ್ತಾದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande