ವಿಜಯಪುರ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಅದ್ಧೂರಿಯಾಗಿ ಪಥಸಂಚಲನ ಮಾಡಲಾಯಿತು.
ವಿಜಯಪುರ ನಗರದ ಗೋದಾವರಿ ಹೋಟೆಲ್‌ನಿಂದ ಆರ್‌ಎಸ್‌ಎಸ್‌ಗೆ ಚಾಲನೆ ನೀಡಲಾಯಿತು. ವಿಜಯದಶಮಿ ಉತ್ಸವ ಮತ್ತು ಪಂಥಸಂಚಲನ ಹಿನ್ನೆಲೆ ನಗರಾದ್ಯಂತ ಹಲವಾರು ಕಾಲೋನಿಯಲ್ಲಿ ವಿಜೃಂಭಣೆಯಿಂದ ಪಥಸಂಚಲನ ನಡೆಯಿತು.
ಈ ವೇಳೆ ಹಲವಾರು ಕಡೆಗೆ ರಂಗೋಲಿ ಹಾಕಿ ಮಹಿಳೆಯರು ಸ್ವಾಗತಿಸಿದರು. ಅಲ್ಲದೇ, ಆರ್‌ಎಸ್‌ಎಸ್ ನಾಯಕರ ಮೇಲೆ ಹೂವಿನ ಸುರಿಮಳೆಗೈದರು.
ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗದಂತೆ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಬೀಗಿ ಪೊಲೀಸ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande