ಗದಗ ಜಿಲ್ಲೆಗೆ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ : ಎಂ.ಎಂ.ಹಿರೇಮಠ
ಗದಗ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ(ಪಿಎಮ್‍ಡಿಡಿಕೆವಾಯ್) ಯನ್ನು ರೂಪಿಸಿದ್ದು, ರಾಷ್ಟ್ರದ 100 ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು ಅದರಲ್ಲಿ ಹಾವೇರಿ ಲೋಕಸಭಾಕ್
ಪೋಟೋ


ಗದಗ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ(ಪಿಎಮ್‍ಡಿಡಿಕೆವಾಯ್) ಯನ್ನು ರೂಪಿಸಿದ್ದು, ರಾಷ್ಟ್ರದ 100 ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು ಅದರಲ್ಲಿ ಹಾವೇರಿ ಲೋಕಸಭಾಕ್ಕೆ ಸೇರಿರುವ ಗದಗ ಮತ್ತು ಹಾವೇರಿ 2 ಜಿಲ್ಲೆಯನ್ನು ಸೇರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಹಾಗು ಗದಗ ಜಿಲ್ಲೆಗೆ ಈ ಯೋಜನೆ ಬರಲು ಕಾರಣಿಭೂತರಾದ ಮಾಜಿ ಮುಖ್ಯಮಂತ್ರಿಗಳು ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿಯವರಿಗೆ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠ ಅವರು ಅಭಿನಂದನೆಗಳನ್ನು ಸಲ್ಲಿಸಿರುವರು.

ಸಮಗ್ರ ಕೃಷಿ ಉತ್ಪನ್ನ ಹೆಚ್ಚಿಸುವದು, ಕೃಷಿಯಲ್ಲಿ ವಿವಿಧ ದವಸ ಧಾನ್ಯಗಳನ್ನು ಬೆಳೆಯುವದು ಮತ್ತು ಸಮಗ್ರ ಕೃಷಿ ಅಭಿವೃದ್ಧಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ರೈತರಿಗೆ ಅಲ್ಪಾವಧಿ ಹಾಗು ಧೀರ್ಘಾವಧಿ ಹಣಕಾಸು ನೆರವು ನೀಡುವದು ಮತ್ತು ಸುಗ್ಗಿಯ ನಂತರ ಪಂಚ್ಯಾಯತ್ ಮತ್ತು ಬ್ಲಾಕ್ ಲೆವಲ್‍ನಲ್ಲಿ ಧವಸ-ಧಾನ್ಯಗಳ ದಾಸ್ತಾನು ನಿರ್ಮಾಣ ಮಾಡುವದು ಮತ್ತು ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳನ್ನು ಸಂಯೋಜನೆಗೊಳಿಸಿ ಸಮಗ್ರವಾಗಿ ಕಾರ್ಯಕ್ರಮಗಳ ಅನುಷ್ಠಾನ ಮಾಡುವದು ಮತ್ತು ಸಮಗ್ರ ಕೃಷಿ ಅಭಿವೃದ್ಧಿಗೆ ದೊಡ್ಡ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ಮಾಡಿದ್ದು ಇದರಿಂದ ಗದಗ ಜಿಲ್ಲೆಯ ರೈತರಿಗೆ ಬಹಳಷ್ಟು ಅನುಕೂಲವಾಗಲಿದ್ದು, ಈ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಎಂ.ಎಂ.ಹಿರೇಮಠ ಅವರು ಅಭಿನಂದನೆಗಳನ್ನು ಸಲ್ಲಿಸಿರುವರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande