ಕಡ್ಡಾಯವಾಗಿ 5.5 ಅಡಿ ಎತ್ತರದಲ್ಲಿ ವಿದ್ಯುತ್ ಮೀಟರ್ ಅಳವಡಿಸಿ
ಹೊಸಪೇಟೆ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹೊಸಪೇಟೆ ನಗರ ಉಪವಿಭಾಗ-2 ರಲ್ಲಿ ಆಪ್ಟಿಕಲ್ ಪ್ರೋಬ್ ಡಿವೈಸ್‍ನಿಂದ ಮೀಟರ್ ರೀಡಿಂಗ್ ಮಾಡಬೇಕಾಗಿರುವುದರಿಂದ ವಿದ್ಯುತ್ ಮೀಟರನ್ನು ಕೈಗೆಟುಕುವಂತೆ ಅಳವಡಿಸಬೇಕೆಂದು ತಿಳಿಸಿದ್ದಾರೆ. ಗ್ರಾಹಕರ ಕಡ್ಡಾಯವಾಗಿ ವಿದ್ಯುತ್ ಮೀಟರ್ ಗಳನ್ನು ಕೈಗೆಟುವಂತೆ
ಕಡ್ಡಾಯವಾಗಿ 5.5 ಅಡಿ ಎತ್ತರದಲ್ಲಿ ವಿದ್ಯುತ್ ಮೀಟರ್ ಅಳವಡಿಸಿ


ಹೊಸಪೇಟೆ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹೊಸಪೇಟೆ ನಗರ ಉಪವಿಭಾಗ-2 ರಲ್ಲಿ ಆಪ್ಟಿಕಲ್ ಪ್ರೋಬ್ ಡಿವೈಸ್‍ನಿಂದ ಮೀಟರ್ ರೀಡಿಂಗ್ ಮಾಡಬೇಕಾಗಿರುವುದರಿಂದ ವಿದ್ಯುತ್ ಮೀಟರನ್ನು ಕೈಗೆಟುಕುವಂತೆ ಅಳವಡಿಸಬೇಕೆಂದು ತಿಳಿಸಿದ್ದಾರೆ.

ಗ್ರಾಹಕರ ಕಡ್ಡಾಯವಾಗಿ ವಿದ್ಯುತ್ ಮೀಟರ್ ಗಳನ್ನು ಕೈಗೆಟುವಂತೆ ಎತ್ತರದಲ್ಲಿ ಅಳವಡಿಸಿದ್ದಲ್ಲಿ ಅಕ್ಟೋಬರ್ 25 ರೊಳಗೆ ನೆಲದಿಂದ 5.5 ಅಡಿ ಎತ್ತರದಲ್ಲಿ ಮೀಟರ್‍ನ್ನು ಅಳವಡಿಸಿಬೇಕು.

ಎತ್ತರದಲ್ಲಿ ಅಥವಾ ಕಾಣದ ಹಾಗೆ ಮೀಟರ್ ಅಳವಡಿಸಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande