ನೀರಜ್ ಚೋಪ್ರಾ ದಾಖಲೆ ಮುರಿದ ಹಿಮಾಂಶು ಜಾಖರ್
ಭುವನೇಶ್ವರ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯನ್ ಅಂಡರ್-18 ಚಾಂಪಿಯನ್ ಹಿಮಾಂಶು ಜಾಖರ್ ಅವರು ಭಾರತೀಯ ಸ್ಟಾರ್ ಜಾವೆಲಿನ್ ತ್ರೋವರ್ ನೀರಜ್ ಚೋಪ್ರಾ ಅವರ 11 ವರ್ಷದ ಹಿಂದಿನ ದಾಖಲೆಯನ್
Athletic


ಭುವನೇಶ್ವರ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯನ್ ಅಂಡರ್-18 ಚಾಂಪಿಯನ್ ಹಿಮಾಂಶು ಜಾಖರ್ ಅವರು ಭಾರತೀಯ ಸ್ಟಾರ್ ಜಾವೆಲಿನ್ ತ್ರೋವರ್ ನೀರಜ್ ಚೋಪ್ರಾ ಅವರ 11 ವರ್ಷದ ಹಿಂದಿನ ದಾಖಲೆಯನ್ನು ಮುರಿದರು. ಈ ಅಪೂರ್ವ ಸಾಧನೆಯಿಂದ ಹಿಮಾಂಶು 2026ರ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ಹಿಮಾಂಶು ಅವರು 79.96 ಮೀಟರ್ ದೂರ ಎಸೆಯುವ ಮೂಲಕ 2014ರಲ್ಲಿ ವಿಜಯವಾಡದಲ್ಲಿ ನೀರಜ್ ಚೋಪ್ರಾ ನಿರ್ಮಿಸಿದ್ದ 76.50 ಮೀಟರ್‌ನ ದಾಖಲೆಗಿಂತ ಮೂರು ಮೀಟರ್ ಹೆಚ್ಚು ಸಾಧನೆ ಮಾಡಿದರು. ಈ ಪ್ರದರ್ಶನವು ವಿಶ್ವ ಅಂಡರ್-20 ಅರ್ಹತಾ ಅಂಕ (68.50 ಮೀ) ಗಿಂತಲೂ ಅತ್ಯಂತ ಉತ್ತಮವಾಗಿದೆ. ಕಳೆದ ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಹಿಮಾಂಶು 67.57 ಮೀ ಎಸೆದು ಚಿನ್ನದ ಪದಕ ಗೆದ್ದಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande