ಬೆಂಗಳೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಶಿಕ್ಷಣದಿಂದ ಸಬಲೀಕರಣದವರೆಗೆ ನಮ್ಮಸರ್ಕಾರ ಹೆಣ್ಣುಮಕ್ಕಳಿಗೆ ಸದಾ ಬೆಂಬಲವಾಗಿ ನಿಂತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳದಿನಾಚರಣೆ ಅಂಗವಾಗಿ ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಇಂದು, ನಮ್ಮ ಯೋಜನೆಗಳ ಮೂಲಕ ಅವರು ಆತ್ಮವಿಶ್ವಾಸ, ಸ್ವಾತಂತ್ರ್ಯ ಮತ್ತು ಅವಕಾಶಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಈ ದಿನವು ಆಚರಣೆಯಷ್ಟೇ ಅಲ್ಲ, ಅದು ಹೆಣ್ಣುಮಕ್ಕಳ ಕನಸುಗಳಿಗೆ, ಅವರ ಧೈರ್ಯಕ್ಕೆ, ಅವರ ಹೋರಾಟಕ್ಕೆ ಮತ್ತು ಅವರ ಯಶಸ್ಸಿಗೆ ಗೌರವ ಸಲ್ಲಿಸುವ ದಿನ.
ಪ್ರತಿಯೊಂದು ಹೆಣ್ಣುಮಗು ಶಿಕ್ಷಣ ಪಡೆಯಲಿ ಸಂಸಾರಕ್ಕೂ ಸಮಾಜಕ್ಕೂ ಬೆಳಕಾಗಲಿ ಎಂದು ಹಾರೈಸಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಕ್ಕೆ ಶುಭಾಶಯ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa