ಧಾರಾಕಾರ ಮಳೆ, ನೆಲ ಕಚ್ಚಿದ ತೋಟಗಾರಿಕೆ ಬೆಳೆಗಳು ; ರೈತರ ಶ್ರಮ ಮಣ್ಣು ಪಾಲು
ಧಾರಾಕಾರ ಮಳೆಯಿಂದಾಗಿ ನೆಲಕಚ್ಚಿದ ತೋಟಗಾರಿಕಾ ಬೆಳೆಗಳು ;ರೈತರ ಶ್ರಮ ಮಣ್ಣು ಪಾಲು
ಚಿತ್ರ; ಧಾರಾಕಾರ ಮಳೆಯಿಂದಾಗಿ ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಸಂಪ್ ಕುಮಾರ್ ಬೆಳೆದಿದ್ದ ಎಲೆಕೋಸು ನೆಲಕಚ್ಚಿದೆ


ಎಸ್.ಚಂದ್ರಶೇಖರ್

ಕೋಲಾರ, ೧೧ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಳೆದ ಮೂರು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ನೆಲ ಕಚ್ಚಿವೆ.ಟಮೋಟೊ ಕೋಸು ಮುಂತಾದ ಬೆಳೆಗಳು ವ್ಯಾಪವಾಗಿ ಸುರಿದಿರುವ ಮಳೆಯ ಕಾರಣ ನೆಲಕಚ್ಚಿದ್ದು ರೈತರ ಶ್ರಮ ಮಣ್ಣು ಪಾಲು ಆಗಿದೆ.

ಸಾಲ ಮಾಡಿ ಬೆಳೆ ಮಾಡಿರುವ ರೈತರ ಬದುಕು ಮೂರಾಬಟ್ಟೆಯಾಗಿದೆ.ಹಗಲು ಬಿಡುವು ಕೊಡುವ ಮಳೆ ರಾತ್ರಿಯಾಗುತ್ತಿದ್ದಂತೆ ದಬೋ ಎಂದು ಸುರಿಯುತ್ತದೆ. ಹೊಟ್ಟೆ ಕಟ್ಟಿಕೊಂಡು ಬಿಸಿಲು ಮಳೆ ಎನ್ನದೇ ಹಗಲು ರಾತ್ರಿ ಎನ್ನದೇ ಸಾಲ ಸೋಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹೂಡಿ ಬೆಳೆದ ಬೆಳೆ ಇನ್ನೇನು ಕೈಗೆಟಕುವ ಸಮಯದಲ್ಲಿ ಸುರಿದ ಬಾರಿ ಮಳೆಗೆ ರೈತರ ಜಮೀನುಗಳಿಗೆ ಮಳೆ ನೀರು ಆವರಿಸಿ ರೈತನ ಬದುಕನ್ನು ಕಸಿದುಕೊಂಡಿದೆ.

ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ರೈತ ಸಂಪತ್ ಕುಮಾರ್ ರೂ.೫.೦೦ ಲಕ್ಷಗಳ ಸಾಲ ಮಾಡಿ ಎಲೆ ಕೋಸು ಬೆಳೆದಿದ್ದರು. ಬೆಳೆ ಸಮೃದ್ಧಿಯಾಗಿ ಬೆಳೆದಿದ್ದು, ಒಂದು ವಾರದೊಳಗೆ ಕಟಾವಿಗೆ ಬರುತ್ತಿದ್ದ ಬೆಳೆ ತಡರಾತ್ರಿ ಸುರಿದ ಬಾರಿ ಮಳೆಗೆ ರೈತನ ಎಲೆ ಕೋಸು ಸಂಪೂರ್ಣ ಜಲಾವೃತಗೊಂಡು ರೈತನ ಬದುಕನ್ನು ಕಸಿದುಕೊಳ್ಳುವ ಮೂಲಕ ಕಣ್ಣೀರಲ್ಲಿ ರೈತನ ಕುಟುಂಬ ಮುಳುಗುವಂತಾಗಿದೆ.

೪ ಎಕರೆ ಜಮೀನಿನಲ್ಲಿ ಐದಾರು ಲಕ್ಷ ರೂ. ಬಂಡವಾಳ ಹಾಕಿ ಎಲೆ ಕೋಸು ಬೆಳೆ ಬೆಳೆದಿದ್ದ ರೈತ ತನ್ನೆಲ್ಲಾ ಕಷ್ಟಗಳು ನಿವಾರಣೆಯಾಗುವ ಭರವಸೆಯಲ್ಲಿದ್ದ, ಆದರೆ ಮಳೆರಾಯನ ಅಟ್ಟಹಾಸಕ್ಕೆ ರೈತನ ಕನಸ್ಸುಗಳನ್ನು ಒಂದೇ ರಾತ್ರಿಯಲ್ಲಿ ಭಗ್ನಗೊಳಿಸಿದೆ.

ರೈತ ತಾನು ಬೆಳೆದ ಬೆಳೆಗೆ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ, ವ್ಯಾಪರಸ್ಥರು ಸಹ ಎಲೆ ಕೋಸು ಖರೀದಿಮಾಡಲು ಮುಂದಾಗಿದ್ದರು. ಆದರೆ ಬೆಳೆ ಕಟಾವಿಗೆ ಒಂದು ವಾರ ಬೇಕಾಗಿತ್ತು. ಆದರೆ ತಡ ರಾತ್ರಿ ಸುರಿದ ಗುಡುಗು ಸಹಿತ ಬಾರಿ ಮಳೆಗೆ ರೈತನ ಬದುಕು ಮಳೆ ನೀರಲ್ಲಿ ಕೊಚ್ಚಿಹೋಗಿದೆ. ಇದರಿಂದ ತೀವ್ರ ಕಂಗಾಲಾಗಿರುವ ರೈತ ಮುಂದೇನು ಎನ್ನುವ ಚಿಂತೆಯಲ್ಲಿದ್ದಾನೆ. ಕೂಡಲೆ ಜಿಲ್ಲಾಡಳಿತ ರೈತನಿಗೆ ಆಗಿರುವ ನಷ್ಟ ಪರಿಹಾರವನ್ನು ನೀಡಬೇಕಾಗಿದೆ.

ಎಕರೆ ಜಮೀನಿನಲ್ಲಿ ಎಲೆ ಕೋಸು ಬೆಳೆಯಲಾಗಿತ್ತು. ಒಂದು ವಾರದಲ್ಲಿ ಕಟಾವಿಗೆ ಬರುತ್ತಿತ್ತು. ವ್ಯಾಪಾರಸ್ತರಿಗೆ ವ್ಯಾಪಾರವನ್ನು ಮಾಡಲಾಗಿತ್ತು. ತಡ ರಾತ್ರಿ ಸುರಿದ ಮಳೆಗೆ ಹತ್ತರಿಂದ ಹದಿನೈದು ಲಕ್ಷದವರೆಗೆ ನಷ್ಟ ಉಂಟಾಗಿದೆ. ಧಾರಾಕಾರ ಮಳೆ ನನ್ನ ಬದುಕನ್ನು ಕಸಿದುಕೊಂಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಸಂತ್ ಕುಮಾರ್ ಒತ್ತಾಯಿಸಿದ್ದಾರೆ.

ಕೆ ಅಬ್ಬಣಿ ಗ್ರಾಮದಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಐವತ್ತು ಎಕರೆಗೂ ಹೆಚ್ಚು ಜಲಾವೃತಗೊಂಡಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕ ಕಾಲುವೆಗಳು ಇಲ್ಲದ ಕಾರಣಕ್ಕೆ ಮಳೆ ನೀರು ರೈತರು ಬೆಳೆದ ಬೆಳೆಗಳನ್ನು ಆವರಿಸಿದೆ. ಇದರಿಂದ ಹಲವು ಬಗೆಯ ತರಕಾರಿ ಬೆಳೆಗಲು ಜಲಾವೃತಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಇನ್ನೇನ ಕೈಗೆ ಬರಬೇಕಾಗಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಿಗೆ ಸರ್ಕಾರ ಕೂಡಲೆ ನಷ್ಟ ಪರಿಹಾರ ನೀಡಿ ರೈತರ ಬದುಕನ್ನು ಹಸನಾಗಿಸಬೇಕಾಗಿದೆ ಎಂದು ಅಬ್ಬಣಿ ಗ್ರಾಮದ ಮಲಿಕಾರ್ಜುನ್ ಒತ್ತಾಯಿಸಿದ್ದಾರೆ.

ಬಯಲು ಸೀಮೆ ಎಂದೆ ಹಣೆಪಟ್ಟಿ ಕಟ್ಟುಕೊಂಡಿದ್ದ ಕೋಲಾರ ಜಿಲ್ಲೆಗೆ ಮಳೆರಾಯನ ಆಗಮನದಿಂದ ಜಿಲ್ಲೆಯ ಜನರು ಕೊಂಚ ಸಂತೊಷ ಪಟ್ಟರು ಧಾರಾಕಾರ ಮಳೆ ಸುರಿದ ಪರಿಣಾಮ ಒಂದಷ್ಟು ರೈತರ ಬದುಕನ್ನು ಕಸಿದುಕೊಂಡಿದೆ. ಇದಕ್ಕೇಲ್ಲಾ ಮುಖ್ಯ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗುವ ಕಾಲುವೆಗಳ ಒತ್ತುವರಿ. ಆದರೆ ಅಧಿಕಾರಿಗಳು ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಂಡು ಮಳೆಯಿಂದ ಮುಂದೆ ಉಂಟಾಗುವ ಅನಾಹುತಗಳಿಂದ ರಕ್ಷಿಸಬೇಕಾಗಿದೆ.

ಒಟ್ಟಾರೆ ಕೋಲಾರ ಜಿಲ್ಲೆ ಈಗ ಜಲಾಗ್ರಹವಾಗಿದ್ದು, ಇಂದೆಂದೂ ಕೇಳರಿಯದ, ನೋಡಿರದ ರೀತಿಯಲ್ಲಿ ಸುರಿದ ಭಾರಿ ಮಳೆಯಿಂದ ಕೆರೆಗಳ ನಾಡು ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಹರಿದಿವೆ. ಮಳೆ ಹೀಗೆ ಮುಂದುವರೆಯಲಿ ಆದರೆ ರೈತರ ಬದುಕನ್ನು ಕಸಿದುಕೊಳ್ಳದಿರಲಿ ಎನ್ನುವುದು ರೈತರ ಮನದಾಳದ ಮಾತಾಗಿದೆ.ತಡವಾಗಿ ಆಗಮಿಸಿದ ಮುಂಗಾರು ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿವೆ. ನಗರ ಪ್ರದೇಶಗಳಲ್ಲಿ ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಚಿತ್ರ : ಧಾರಾಕಾರ ಮಳೆಯಿಂದಾಗಿ ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಸಂಪ್ ಕುಮಾರ್ ಬೆಳೆದಿದ್ದ ಎಲೆಕೋಸು ನೆಲಕಚ್ಚಿದೆ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande