ಬೆಂಗಳೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುಣಾವಣೆಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಔತಣಕೂಟ ಏರ್ಪಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ವೀರೇಂದ್ರ ಪಪ್ಪಿ ಚಿನ್ನದ ಲಾಲಿ ಪಪ್ ಹಿಡಿದುಕೊಂಡು ಕೂತಿದ್ದರು. ಚಿನ್ನವನ್ನು ಬಿಹಾರಕ್ಕೆ ಕಳಿಸಲು ಮುಂದಾಗಿದ್ದ ವೇಳೆ ಇಡಿ ಅಧಿಕಾರಿಗಳು ಹಿಡಿದು ಹಾಕಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಬಿಹಾರ ಚುನಾವಣೆಯ ಎಟಿಎಂ ಆಗಿದೆ. ಬಿಹಾರ ಚುನಾವಣೆಗೆ ಹಣ ಸಂಗ್ರಹಿಸಲು ಮುಖ್ಯಮಂತ್ರಿ ಸಚಿವರ ಔತಣ ಕೂಟ ಕರೆದಿದ್ದಾರೆ. ₹300 ಕೋಟಿಯಷ್ಟು ಮೊತ್ತದ ವಿರೇಂದ್ರ ಪಪ್ಪಿ ಚಿನ್ನ ಸಿಕ್ಕಿದೆ. ಹೀಗಾಗಿ ಸಚಿವರು ತಮ್ಮ ಇಲಾಖೆಯಿಂದ ಎಷ್ಟು ಸಂಗ್ರಹ ಮಾಡಬೇಕು ಎಂದು ಈ ಔತಣಕೂಟ ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa