ಮುಖ್ಯಮಂತ್ರಿ ಸಿದ್ದರಾಮಯ್ಯ ಘೇರಾವ್ : ಎಚ್ಚರಿಕೆ
ವಿಜಯಪುರ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರದ ಶಾಸಕರಾದ ಜಗದೀಶ ಗುಡಗುಂಟಿ, ವಾಲ್ಮೀಕಿ ಜಯಂತಿಯಂದು ಶ್ರೀಮಹರ್ಷಿ ವಾಲ್ಮೀಕಿ ಕುರಿತು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ವಾಲ್ಮೀಕಿ ಸಮಾಜಕ್ಕೆ ತುಂಬಾ ನೋವು ಉಂಟು ಮಾಡಿದ್ದಾರೆ. ಆದ್ದರಿಂದ ಶಾಸಕ ಜಗದೀಶ್ ಗುಡಗುಂಟ
ಸಿಎಂ


ವಿಜಯಪುರ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರದ ಶಾಸಕರಾದ ಜಗದೀಶ ಗುಡಗುಂಟಿ, ವಾಲ್ಮೀಕಿ ಜಯಂತಿಯಂದು ಶ್ರೀಮಹರ್ಷಿ ವಾಲ್ಮೀಕಿ ಕುರಿತು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ವಾಲ್ಮೀಕಿ ಸಮಾಜಕ್ಕೆ ತುಂಬಾ ನೋವು ಉಂಟು ಮಾಡಿದ್ದಾರೆ. ಆದ್ದರಿಂದ ಶಾಸಕ ಜಗದೀಶ್ ಗುಡಗುಂಟಿ ವಾಲ್ಮೀಕಿ ಸಮಾಜಕ್ಕೆ ಕ್ಷಮೆಕೇಳಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಬಾದಾಮಿ ತಾಲ್ಲೂಕು ಅಧ್ಯಕ್ಷ ಪ್ರಕಾಶ ನಾಯ್ಕರ ಹೇಳಿದರು.

ಶನಿವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗತ್ತಿಗೆ ಶ್ರೀಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ಪರಿಚಯ ಮಾಡಿಕೊಟ್ಟಿರುವಂತಹ ಮಹಾನ ಮೇದಾವಿ ಮಹರ್ಷಿ ಅವರ ಕುರಿತು ಶಾಸಕ ಗುಡಗುಂಟಿ ಮಾತನಾಡಿರುವಂತ ಶಬ್ದಗಳು ತಮಗೆ ಹಾಗೂ ಪ್ರಭು ಶ್ರೀರಾಮಣ ಹೆಸರಿನಿಂದ ರಾಷ್ಟ್ರ ಹಾಗು ಹಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವಂತಹ ತಮಗೆ ಶೋಭೆ ತರುವಂತಹ ಲಕ್ಷಣವಲ್ಲ. ಅದಕ್ಕಾಗಿ ವಾಲ್ಮೀಕಿ ಜನಾಂಗಕ್ಕೆ ಕ್ಷಮಾಪಣೆ ಕೇಳಬೇಕು. ಕ್ಷಮಾಪಣೆ ಕೇಳದಿದ್ದರೆ ಬಾಗಲಕೋಟೆ ಜಿಲ್ಲೆಯ ಸಮಸ್ತ ವಾಲ್ಮೀಕಿ ಜನಾಂಗವು ತಮ್ಮ ಮನೆಗೆ ಮುತ್ತಿಗೆ ಹಾಕುವುದರೊಂದಿಗೆ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನೊಂದು ಕಡೆ ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಯ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಜಾಸ್ತಿಯಾಗಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವಂತಹ ಸಂಗತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ವಿಧಾನ ಪರಿಷತ್ ಸದಸ್ಯರು, ಲೋಕ ಸಭಾ ಸದಸ್ಯರು ಒತ್ತಡದಿಂದಾಗಿ ಸರ್ಕಾರಿ ಹುದ್ದೆಗಳಲ್ಲಿ ನೇಮಕವಾಗಲು ಹಾಗೂ ಉನ್ನತ ಪದೋನ್ನತಿ ಪಡೆಯಲು ಮೇಲ್ಕಾಣಿಸಿದ ಚುನಾಯಿತ ಪ್ರತಿನಿಧಿಗಳು ತಮ್ಮ ಮತಬ್ಯಾಂಕಿಗಾಗಿ ಹಿಂಬಾಗಿಲು ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವಂತಹ ಸಂಗತಿಗಳು ಸಮಾಜಕ್ಕೆ ಕಂಡು ಬಂದಿದೆ. ಇದಕ್ಕೆ ಪ್ರತಿ ಉತ್ತರವನ್ನು ಮುಂಬರುವ ಸ್ಥಳೀಯ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜ ತೋರಿಸಬೇಕಾಗುತ್ತದೆ ಎಂದರು.

ವಾಲ್ಮೀಕಿ ಸಮಾಜದ ನಾಯಕರನ್ನು ರಾಜಕೀಯ ತುಳಿಯುವ ಯತ್ನಮಾಡಲಾಗುತ್ತಿದೆ. ನಕಲಿ ಜಾತಿ ಪ್ರಮಾಣ ಪತ್ರ ದುರುಪಯೋಗ ಪರಿಹಾರಕ್ಕೆ ಆಗ್ರಹಿಸಿ ಅ.೧೩ ರಂದು ಬಾಗಲಕೋಟ ಜಿಲ್ಲೆಯ ಬಂಡಿಗಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಲಾಗುತ್ತದೆ ಎಂದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕ್ಯಾದಿಗೇರಿ, ಜಿಲ್ಲಾ ಕಾರ್ಯದರ್ಶಿ ಹಣಮಂತ ಡೋಣಿ, ಜಿಲ್ಲಾ ಮಾಧ್ಯಮ ವಕ್ತಾರ ಜಯರಾಜ ಹಾದಿಕರ ,ಹೇಮಂತ ಚೂರಿ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande