ಕೋಲಾರ, ೧೧ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿರವರ ನ್ಯಾಯ ಪೀಠಕ್ಕೆ ಶೂ ಎಸದ ಪ್ರಕರಣ ಖಂಡಿಸಿ ಕೋಲಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ವತಿಯಿಂದ ಅಕ್ಟೋಬರ್ ೧೭ಕ್ಕೆ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ.
ಶನಿವಾರ ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿನ ಬುದ್ಧ ವಿಹಾರದಲ್ಲಿ ಜಿಲ್ಲೆಯ ದಲಿತ, ರೈತ, ಪ್ರಗತಿಪರ, ಕನ್ನಡಪರ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಅತಿಥಿ ಉಪನ್ಯಾಸಕರ ಸಂಘ ಮತ್ತು ಮಹಿಳಾ ಸಂಘಟನೆಗಳು ಸಭೆ ಸೇರಿ ಚರ್ಚೆ ನಡೆಸಿದರು.
ಸ್ವಾತಂತ್ರ್ಯ ಭಾರತ ದೇಶದವನ್ನು ಪ್ರಜಾಪ್ರಭುತ್ವ ನೆಲೆಯಲ್ಲಿ ಮುನ್ನಡೆಸುತ್ತಿರುವ ಮಾನವೀಯ ಧರ್ಮ ಗ್ರಂಥ ಭಾರತ ಸಂವಿಧಾನ ಪ್ರಧಾನ ಅಂಗವಾದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಪೀಠವನ್ನು ಶೂ ಎಸೆಯುವ ಮೂಲಕ ಅಪಮಾನಗೊಳಿಸಿದ ದೇಶದ್ರೋಹಿ ರಾಕೇಶ್ ಕಿಶೋರ್ ನನ್ನು ಭಾರತದಿಂದ ಗಡಿಪಾರು ಮಾಡಬೇಕು, ೧೪೦ಕೋಟಿ ಜನತೆಯ ನಂಬಿಕೆಯ ಭಾವನೆಗೆ ನೋವುಂಟು ಮಾಡಿದ ಈ ದೇಶ ವಿರೋಧಿ, ಸಂವಿಧಾನ ವಿರೋಧಿ, ಮನುಷ್ಯ ವಿರೋಧಿ ಸನಾತನಿಗಳ ಕೃತ್ಯ ಖಂಡಿಸಿ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳಿಗೆ ಸಂದೇಶ ರವಾನಿಸಬೇಕಿದೆ ಎಂದು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರು.
ದೇಶದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಲು, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ರಕ್ಷಣೆ ಮಾಡಿಕೊಳ್ಳಲು ಒಕ್ಕೊರಲಿನ ಸಂದೇಶ ಸಾರಲು ಕೋಲಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದಿಂದ ಅಕ್ಟೋಬರ್ ೧೭ಕ್ಕೆ ಜಿಲ್ಲಾ ಬಂದ್ ಮಾಡಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಭೆಗಳು ಮತ್ತು ಸುದ್ದಿಗೋಷ್ಠಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಟಿ. ವಿಜಯ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ಸಿಪಿಎಂ ಮುಖಂಡ ಗಾಂಧೀನಗರ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಮುಖಂಡರಾದ ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಅಫ್ರೋಜ್ ಪಾಷಾ, ಅನ್ವರ್ ಪಾಷ, ಎ.ಪಿ.ಎಲ್.ರಂಗನಾಥ್, ಹಾರೋಹಳ್ಳಿ ರವಿ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸಂಗಸಂದ್ರ ವಿಜಯ್ ಕುಮಾರ್, ರೈತ ಮುಖಂಡರಾದ ಅಬ್ಬಿಣಿ ಶಿವಪ್ಪ, ಟಿ.ಎಂ.ವೆಂಕಟೇಶ್, ಕಾರ್ಮಿಕ ಮುಖಂಡರಾದ ಹೊನ್ನೇನಹಳ್ಳಿ ಯಲ್ಲಪ್ಪ, ವಿಜಯ್ ಕೃಷ್ಣ, ಚಂದ್ರಮೌಳಿ, ಅಶ್ವಥ್ ನಾರಾಯಣ ಅಂತ್ಯಜ, ವರದೇನಹಳ್ಳಿ ವೆಂಕಟೇಶ್, ಸಿ.ವಿ.ನಾಗರಾಜ್, ಮಾರ್ಜೇನಹಳ್ಳಿ ಬಾಬು, ಶೆಟ್ಟಿಗಾನಹಳ್ಳಿ ಅಂಬರೀಷ್, ದೊಡ್ನಹಳ್ಳಿ ಸುಬ್ರಮಣಿ, ಹೂಹಳ್ಳಿ ನಾಗರಾಜ್, ಹಿರೇಕರಪನಹಳ್ಳಿ ಯಲ್ಲಪ್ಪ, ಚಿಗುರು ಪ್ರಭಾವತಿ , ಈನೆಲ ಈಜಲ ವೆಂಕಟಾಚಲಪತಿ, ಬೊಜ್ಜು ರಾಜಪ್ಪ, ಶಂಕರಪ್ಪ, ಸಿ.ಎಂ.ಅಶೋಕ್, ಎಂ.ಸಿ.ಚಂದ್ರಯ್ಯ, ರಾಧಾಕೃಷ್ಣ, ಮಾಲೂರು ಸಂಪಂಗಿ ಸೇರಿದಂತೆ ಜಿಲ್ಲೆಯ ಎಲ್ಲಾ
ತಾಲೂಕುಗಳಿಂದ ಹಲವಾರು ಜನ ಮುಖಂಡರು ಭಾಗವಹಿಸಿದ್ದರು.
ಚಿತ್ರ ; ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿನ ಬುದ್ಧ ವಿಹಾರದಲ್ಲಿ ಜಿಲ್ಲೆಯ ದಲಿತ, ರೈತ, ಪ್ರಗತಿಪರ ಸಂಘಟನೆಗಳು ಸಭೆ ಸೇರಿ ಶೂ ಎಸೆತ ಪ್ರಕರಣ ವಿರೋಧಿಸಿ ಕೋಲಾರ ಬಂದ್ ಆಚರಿಸಲು ನಿರ್ಧರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್