ಸಾಮಾನ್ಯ, ಎಸ್‌ಸಿ,ಎಸ್‌ಟಿ ರೈತರಿಗೆ ಎಎಂಸಿ ವಿತರಣೆ ಕಾರ್ಯಕ್ರಮ
ಶಿವಮೊಗ್ಗ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ “ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ” ಕಾರ್ಯಕ್ರಮದಡಿ ಜೈವಿಕ ಗೊಬ್ಬರವಾದ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್ (ಎಎಂಸಿ) ಪರಿಕರವನ್ನು
ಸಾಮಾನ್ಯ, ಎಸ್‌ಸಿ,ಎಸ್‌ಟಿ ರೈತರಿಗೆ ಎಎಂಸಿ ವಿತರಣೆ ಕಾರ್ಯಕ್ರಮ


ಶಿವಮೊಗ್ಗ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ “ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ” ಕಾರ್ಯಕ್ರಮದಡಿ ಜೈವಿಕ ಗೊಬ್ಬರವಾದ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್ (ಎಎಂಸಿ) ಪರಿಕರವನ್ನು ಅರ್ಹ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅರ್ಹ ರೈತರಿಂದ ನೋಂದಣಿ ಆಹ್ವಾನಿಸಿದೆ.

ಆಸಕ್ತ ರೈತರು ಪಹಣಿ, ಆಧಾರ ಮತ್ತು ಬ್ಯಾಂಕ್ ಪಾಸ್‌ಬುಕ್, ಎಸ್‌ಸಿ/ಎಸ್‌ಟಿ ರೈತರು ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ನಕಲುಗಳೊಂದಿಗೆ ಸಹಾಯಕ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸುವಂತೆ ಶಿಕಾರಿಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande