ರಾಯಚೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ನಗರವನ್ನು ಸ್ವಚ್ಚ ಮತ್ತು ಸುಂದರ ನಗರವನ್ನಾಗಿಸಲು ಮಹಾನಗರ ಪಾಲಿಕೆಯ ಆಡಳಿತದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಶಾಲಾ ಹಂತದಿಂದಲೆ ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಪ್ರತಿ ಮನೆ-ಮನೆಗಳಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ನಗರವನ್ನು ಸ್ವಚ್ಚ-ಸುಂದರಗೊಳಿಸಲು ಸಾಧ್ಯ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ರೈಸಿಂಗ್ ಶೀರ್ಷಿಕೆಯಡಿ ರಾಯಚೂರು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ಸ್ವಚ್ಚ ಮತ್ತು ಸುಂದರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಸ್ವಚ್ಚತೆ ಹಾಗೂ ಸೌಂದರ್ಯ ಹೆಚ್ಚಿಸಬೇಕಾದರೆ ರಸ್ತೆ ಬದಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಮಹಾನಗರ ಪಾಲಿಕೆ ಆಡಳಿತದಿಂದ ಸ್ವಚ್ಚತೆಗಾಗಿ ಪ್ರತಿದಿನ ತ್ಯಾಜ್ಯ ವಿಲೇವಾರಿ ಆಟೋ ಹಾಗೂ ಟಿಪ್ಪರ್ ಗಳು ಓಡಾಡುತ್ತಿವೆ. ನಗರದ ಜನತೆ ಮನೆಯಿಂದಲೆ ಹಸಿ- ಒಣ ಕಸವನ್ನು ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಬೇಕು.
ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸ್ವಚ್ಚತೆ, ಪ್ರತಿ ಬಡಾವಣೆಯಲ್ಲಿ ಮುಖ್ಯ ರಸ್ತೆಗಳಲ್ಲಿ ಲೈಟ್ಸ್ ಅಳವಡಿಕೆ, ವಿಮಾನ ನಿಲ್ದಾಣ ಕಾಮಗಾರಿ, ಈದ್ಗಾ ಮೈದಾನ, ಮಾವಿನ ಕೆರೆ ಅಭಿವೃದ್ಧಿ, ಮಹಿಳಾ ಸಮಾಜ, ರಸ್ತೆಗಳು ಸೇರಿ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ಸ್ವಚ್ಚ ಸುಂದರ ನಗರಕ್ಕಾಗಿ ಮಹಾನಗರ ಪಾಲಿಕೆ ಆಡಳಿತ ಮಂಡಳಿ ಜತೆ ಸ್ಥಳೀಯ ನಾಗರಿಕರು, ಮಹಿಳೆಯರು, ಶಿಕ್ಷಣ ಸಂಸ್ಥೆಗಳ ಸಹಕಾರ ಸಿಕ್ಕರೆ ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಲು ಅನುಕೂಲವಾಗಲಿದೆ. ಇಂದೋರ್ ನಿಂದ ಸ್ವಚ್ಚತೆ ಜಾಗೃತಿಗಾಗಿ ನಿಯೋಗ ಬರಲಿದೆ ಆ ನಿಯೋಗದ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು
ನಂತರ ಮಹಾನಗರ ಪಾಲಿಕೆ ಉಪ ಆಯುಕ್ತದರಾದ ಸಂತೋಷ ರಾಣಿ ಮಾತನಾಡಿ, ರಾಯಚೂರು ನಗರದ ಸ್ವಚ್ಚತೆಗಾಗಿ ಈಗಾಗಲೆ ಮಧ್ಯಪ್ರದೇಶದ ಇಂದೋರ ನಲ್ಲಿ ಕೈಗೊಳ್ಳುವ ಸ್ವಚ್ಚತಾ ಜಾಗೃತಿ, ಕ್ರಮಗಳನ್ನು ನಾವು ಸಹ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಪ್ರತಿದಿನ ಪೌರ ಕಾರ್ಮಿಕರ ಪ್ರತಿಮನೆ-ಮನೆಗಳಿಗೆ ಬರುತ್ತಿದ್ದಾರೆ ಅವರನ್ನು ಕಡೆಗಣಿಸಿ ನೋಡಬೇರಿ ಅವರೆಲ್ಲರು ಮಹಾನಗರದ ಸ್ವಚ್ಚತೆಗಾಗಿ ಕೆಲಸ ಮಾಡುತ್ತಿದ್ದಾರೆ ಅವರ ಮನವಿಗೆ ಪ್ರತಿಕ್ರಿಯಿಸಿ ಸ್ವಚ್ಚತೆಗೆ ಸಹಕರಿಸಿ ಎಂದು ತಿಳಿಸಿದರು.
ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಾತನಾಡಿ, ನಾವೆಲ್ಲರು ಸ್ವಚ್ಚ ಮತ್ತು ಸುಂದರ ನಗರಕ್ಕಾಗಿ ಮಹಾನಗರ ಪಾಲಿಕೆಯ ಕ್ರಮಗಳೊಂದಿಗೆ ನಾವೆಲ್ಲರು ಕೈಜೋಡಿಸುತ್ತೇವೆ. ನಮ್ಮ ನಮ್ಮ ಶಾಲೆಗಳ ಮಕ್ಕಳ ಮೂಲಕ ಪ್ರತಿ ಮನೆ-ಮನೆ ಸ್ವಚ್ಚತೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇವೆ. ಪ್ರತಿ ವಾರ್ಡ್ ಗಳಲ್ಲಿ ಆಯಾ ವ್ಯಾಪ್ತಿಯ ಶಾಲೆಗಳೊಂದಿಗೆ ಜಾಗೃತಿ ಮೂಡಿಸಲು ಸಮಿತಿಯನ್ನು ಮಾಡಿ ನಾಟಕ, ಜಾಥಾದ ಮೂಲಕ ಜಾಗೃತಿ ಮೂಡಿಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಜೈಪಾಲ್ ರಡ್ಡಿ, ಮಲ್ಲಿಕಾರ್ಜುನ್, ಮುಖಂಡರಾ ನರಸಿಂಹಲು ಮಾಡಗಿರಿ, ಮಹಾನಗರ ಪಾಲಿಕೆ ಸದಸ್ಯರಾದ ಬಿ ರಮೇಶ, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕೇಶವ್ ರೆಡ್ಡಿ, ರಾಜಾ ಶ್ರೀನಿವಾಸ್, ಸೆಂಟ್ ಥಾಮಸ್, ರಾಮಾಂಜಿ, ಎಂಐಸಿ ಇಕ್ಬಾಲ್, ನಾಗರಡ್ಡಿ, ಸುನೀಲ್ ಕುಮಾರ್, ಹೈಫಿರೋಜ್, ಪ್ರವೀಣ ಕುಮಾರ್, ರಾಕೇಶ ರಾಜಲಬಂಡಿ, ರವಿಕುಮಾರ್, ಆದಿಲ್, ಜುಬೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್