ಮುಜಫರ್‌ನಗರ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.
ಕುಟುಂಬವು ಹರಿದ್ವಾರಕ್ಕೆ ಚಿತಾಭಸ್ಮ ವಿಸರ್ಜಿಸಲು ಪ್ರಯಾಣಿಸುತ್ತಿದ್ದಾಗ, ತ್ರಿದೇವ್ ಹೋಟೆಲ್ ಬಳಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ
ಮೃತರು ಹರಿಯಾಣದ ಫರೀದ್‌ಪುರ ಹಾಗೂ ಸಮೀಪದ ಪ್ರದೇಶದ ನಿವಾಸಿಗಳು: ಮಹೇಂದ್ರ ಜುನೈಜಾ ಅವರ ಕುಟುಂಬದ ಸದಸ್ಯರು ಮತ್ತು ಕಾರು ಚಾಲಕ ಶಿವ ಎಂದು ಗುರುತಿಸಲಾಗಿದ್ದು, ಮಹೇಂದ್ರ ಅವರ ಮಗ ಹಾರ್ದಿಕ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಚಾಲಕ ಟ್ರಕ್ ಸಹಿತ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa