ದೀಪಾವಳಿ ಹಬ್ಬದ ಮೊದಲು ಪರಿಹಾರ ವಿತರಣೆ : ಸಚಿವ ಖಂಡ್ರೆ
ಬೀದರ್, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅತಿವೃಷ್ಟಿಯಿಂದಾಗಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಭಾಗದ ಮಾಂಜ್ರಾ ನದಿ ತೀರದ ಸಾಯಿಗಾವ್, ಮೇಹಕರ, ಹಲ್ಸಿ ತೂಗಾವ್, ವಾಂಜೆರ್ಖೇಡ್, ಕೊಂಗಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ
Visit


ಬೀದರ್, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅತಿವೃಷ್ಟಿಯಿಂದಾಗಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಭಾಗದ ಮಾಂಜ್ರಾ ನದಿ ತೀರದ ಸಾಯಿಗಾವ್, ಮೇಹಕರ, ಹಲ್ಸಿ ತೂಗಾವ್, ವಾಂಜೆರ್ಖೇಡ್, ಕೊಂಗಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ವೇಳೆ ಅಧಿಕಾರಿಗಳಿಗೆ ತುರ್ತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು, ಸಂಕಷ್ಟದಲ್ಲಿರುವ ರೈತ ಬಾಂಧವರಿಗೆ ಸರ್ಕಾರದಿಂದ ಹೆಚ್ಚುವರಿ ₹8,500 ಪರಿಹಾರ ಸೇರಿದಂತೆ ಒಟ್ಟು ₹17,000 ಖುಷ್ಕಿ ಜಮೀನಿಗೆ, ₹25,000 ನೀರಾವರಿ ಜಮೀನಿಗೆ ಹಾಗೂ ₹31,000 ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ಒದಗಿಸಲಾಗುವುದು, ದೀಪಾವಳಿ ಹಬ್ಬದೊಳಗಾಗಿ ರೈತ ಬಾಂಧವರಿಗೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande