ನವದೆಹಲಿ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಒಂಬತ್ತು ದಿನಗಳ ಪವಿತ್ರ ನವರಾತ್ರಿ ಉತ್ಸವದ ಅಂತಿಮ ದಿನವಾದ ಮಹಾ ನವಮಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಅಧಿಕೃತ ಎಕ್ಸ ಖಾತೆಯಲ್ಲಿ, ಮಹಾ ನವಮಿಯ ಶುಭಾಶಯಗಳು ಈ ಪವಿತ್ರ ಸಂದರ್ಭವು ಎಲ್ಲರಿಗೂ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ
ಮಹಾ ನವಮಿ ಭಾರತದಾದ್ಯಂತ ವಿಶಿಷ್ಟ ಧಾರ್ಮಿಕ ಮಹತ್ವ ಹೊಂದಿದ್ದು, ಭಕ್ತರು ದುರ್ಗಾ ದೇವಿಯನ್ನು ಪ್ರಾರ್ಥಿಸಿ ಶಕ್ತಿ ಮತ್ತು ವಿಜಯಕ್ಕಾಗಿ ಆಶೀರ್ವಾದ ಕೋರುವ ದಿನವಾಗಿದೆ. ನವರಾತ್ರಿಯ ಅಂತಿಮ ದಿನವಾಗಿರುವುದರಿಂದ, ಇದು ಹಬ್ಬದ ಸಮಾರೋಪದ ಹಂತವಾಗಿಯೂ ಪರಿಗಣಿಸಲಾಗಿದೆ.
ಪ್ರಧಾನ ಮಂತ್ರಿಯವರ ಈ ಸಂದೇಶವು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗಿನ ಅವರ ನಂಟನ್ನು ತೋರಿಸುವುದರೊಂದಿಗೆ, ದೇಶಾದ್ಯಂತ ಕೋಟ್ಯಂತರ ಜನರಿಗೆ ಉತ್ಸವದ ಸಂಭ್ರಮವನ್ನು ಹಂಚಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa