ಧಾರವಾಡ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅರಭಾವಿ–ಚಳ್ಳಿಕೇರಿ ರಾಜ್ಯ ಹೆದ್ದಾರಿ-45ರ ತಡಹಾಳ ಗ್ರಾಮದ ಬಳಿಯ ಸೇತುವೆ ಭಾರಿ ಮಳೆ ಮತ್ತು ಪ್ರವಾಹದ ಪರಿಣಾಮ ಕುಸಿದಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ತಕ್ಷಣದಿಂದ ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.
ಸೇತುವೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಬದಲಿ ಮಾರ್ಗವಾಗಿ ನರಗುಂದ–ನವಲಗುಂದ ರಾಷ್ಟ್ರೀಯ ಹೆದ್ದಾರಿ-218, ನವಲಗುಂದ–ಶಲವಡಿ ರಾಜ್ಯ ಹೆದ್ದಾರಿ-56 ಮುಖಾಂತರ ಅರಭಾವಿ–ಚಳ್ಳಿಕೇರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.
ಸ್ಥಳದಲ್ಲಿ ಬ್ಯಾರಿಕೇಡಿಂಗ್ ಅಳವಡಿಸಿ, 24x7 ಪೋಲೀಸ್ ಪೇದೆಯನ್ನು ನಿಯೋಜಿಸಲು ಸೂಚಿಸಲಾಗಿದೆ. ಜೊತೆಗೆ ನವಲಗುಂದ ತಹಶೀಲ್ದಾರರು, ತಾಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಆರಕ್ಷಕ ವೃತ್ತ ನಿರೀಕ್ಷಕರು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa