ಛತ್ತೀಸ್‌ಗಢದಲ್ಲಿ ಮೊದಲ ಬಾರಿಗೆ ಡಿಜಿಪಿ-ಐಜಿಪಿ ಸಮ್ಮೇಳನ
ನವದೆಹಲಿ, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢವು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಡಿಜಿಪಿ-ಐಜಿಪಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ನವೆಂಬರ್ 28 ರಿಂದ 30 ರವರೆಗೆ ನಯಾ ರಾಯ್‌ಪುರದ ಹೊಸ ಮೆರೈನ್ ಡ್ರೈವ್ ಸಂಕೀರ್ಣದಲ್ಲಿ ಸಮ್ಮೇಳನ ನಡೆಯಲಿದೆ. ದೇಶಾದ್ಯಂತದ ಪೊಲೀಸ್ ಮಹಾನಿರ್ದ
ಛತ್ತೀಸ್‌ಗಢದಲ್ಲಿ ಮೊದಲ ಬಾರಿಗೆ ಡಿಜಿಪಿ-ಐಜಿಪಿ ಸಮ್ಮೇಳನ


ನವದೆಹಲಿ, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢವು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಡಿಜಿಪಿ-ಐಜಿಪಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ನವೆಂಬರ್ 28 ರಿಂದ 30 ರವರೆಗೆ ನಯಾ ರಾಯ್‌ಪುರದ ಹೊಸ ಮೆರೈನ್ ಡ್ರೈವ್ ಸಂಕೀರ್ಣದಲ್ಲಿ ಸಮ್ಮೇಳನ ನಡೆಯಲಿದೆ. ದೇಶಾದ್ಯಂತದ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

60ನೇ ಸಮ್ಮೇಳನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದು, ಸಮಾರೋಪ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಈ ಬಾರಿ ಸಮ್ಮೇಳನದಲ್ಲಿ ಪ್ರಮುಖವಾಗಿ ನಕ್ಸಲಿಸಂ ವಿರುದ್ಧದ ತಂತ್ರಗಳು, ಭಯೋತ್ಪಾದನಾ ನಿಯಂತ್ರಣ, ಮಾದಕ ದ್ರವ್ಯ ನಿಗ್ರಹ, ಸೈಬರ್ ಭದ್ರತೆ, ಹಾಗೂ ಗಡಿ ನಿರ್ವಹಣೆ ಕುರಿತ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು. ಬಸ್ತಾರ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಹಾಗೂ ಕೇಂದ್ರ ಪಡೆಗಳ ಜಂಟಿ ಕಾರ್ಯಾಚರಣೆಗಳಿಂದಾದ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಯೋಜನೆಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ.

ಪ್ರಧಾನಿ ಮೋದಿ, ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಛತ್ತೀಸ್‌ಗಢಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಅಕ್ಟೋಬರ್ 31 ರಂದು ರಾಯ್‌ಪುರಕ್ಕೆ ಆಗಮಿಸಿ, ನವೆಂಬರ್ 1 ರಂದು ನಡೆಯುವ ರಾಜ್ಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ, ನವೆಂಬರ್ ಕೊನೆಯ ವಾರದಲ್ಲಿ ರಾಯ್‌ಪುರಕ್ಕೆ ಆಗಮಿಸಿ ಡಿಜಿಪಿ-ಐಜಿಪಿ ಸಮ್ಮೇಳನದ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande