ಮೂರು ದಿನಗಳಲ್ಲಿ ೯೦ ಮನೆಗಳ ಸಾಮಾಜಿಕ ಸಮೀಕ್ಷೆ ನಡೆಸಿದ ಶಿಕ್ಷಕಿಗೆ ಪ್ರಸಂಶೆ
ಮೂರು ದಿನಗಳಲ್ಲಿ ೯೦ ಮನೆಗಳ ಸಾಮಾಜಿಕ ಸಮೀಕ್ಷೆ ನಡೆಸಿದ ಶಿಕ್ಷಕಿಗೆ ಪ್ರಸಂಶೆ
ಮೂರು ದಿನಗಳಲ್ಲಿ ೯೦ ಮನೆಗಳ ಸಾಮಾಜಿಕ ಸಮೀಕ್ಷ ನಡೆಸಿದ ಕೋಲಾರ ತಾಲ್ಲೂಕು ವಿಶ್ವನಗರ ಅನುದಾನಿತ ಶಾಲೆಯ ಶಿಕ್ಷಕಿ ಹೆಚ್. ವಸಂತಕುಮಾರಿ ರವರನ್ನು ಕೋಲಾರ ಶಿಕ್ಷಣ ಇಲಾಖೆಯ ಕ್ಲಸ್ಟರ್‌ನಿಂದ ಅಭಿನಂದಿಸಲಾಗಿಯಿತು.


ಕೋಲಾರ, ೦೧ ಅಕ್ಟೋಬರ್ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಕೋಲಾರ ತಾಲೂಕು ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.೧೨ ಸಿಂಗಹಳ್ಳಿ ಐಬಿ ಪ್ರದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ ರ ಅಂಗವಾಗಿ, ಜಿಲ್ಲಾ ಆಡಳಿತದ ವತಿಯಿಂದ ಅರುಣೋದಯ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಿಶ್ವ ನಗರ, ಕ್ಯಾಲನೂರು ಕ್ರಾಸ್‌ನಲ್ಲಿ ಸೇವೆ ನಿರ್ವಹಿಸುತ್ತಿರುವ ಹಿರಿಯ ಶಿಕ್ಷಕಿ ಹೆಚ್. ವಸಂತಕುಮಾರಿ ಅವರನ್ನು ಸರ್ವೆ ಕಾರ್ಯಕ್ಕೆ ನೇಮಿಸಲಾಗಿತ್ತು.

ಅವರು ಅತ್ಯಂತ ಶ್ರದ್ಧೆಯಿಂದ, ಕೇವಲ ಮೂರು ದಿನಗಳಲ್ಲಿ ೯೦ ಮನೆಗಳಿಗೆ ಸರ್ವೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಶಿಕ್ಷಕಿಯಾಗಿ ಮಾತ್ರವಲ್ಲದೆ ಒಂದು ಉತ್ತಮ ನಾಗರಿಕೆಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿ, ಸರ್ಕಾರದ ಹಾಗೂ ಕೋಲಾರ ಜಿಲ್ಲಾಡಳಿತದ ಹೆಮ್ಮೆಗಾಗಿ ಕೀರ್ತಿ ತಂದಿದ್ದಾರೆ.

ವಸ0ತಕುಮಾರಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಸರ್ವೆ ಆರಂಭದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾದವು ಸರ್ವರ್ ಸಮಸ್ಯೆ, ಆ್ಯಪ್ ಡೌನ್‌ಲೋಡ್ ಆಗದ ಬಗೆಯ ತೊಂದರೆಗಳು, ನೆಟ್ವರ್ಕ್ ಸಮಸ್ಯೆ ಇತ್ಯಾದಿ. ಆದರೆ ಈ ಎಲ್ಲ ಅಡೆತಡೆಗಳನ್ನು ಮೀರಿಸಿ, ನಾನು ಸರ್ಕಾರಕ್ಕೆ ಸಮಯಕ್ಕೆ ಸರ್ವೆ ಮಾಹಿತಿ ನೀಡಬೇಕು ಎಂಬ ಉದ್ದೇಶದಿಂದ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರೆಸಿದೆ.

ಪ್ರತಿದಿನ ಬೆಳಿಗ್ಗೆ ೪ ಗಂಟೆಗೆ ಎದ್ದು ಮನೆಯ ಕೆಲಸ ಮುಗಿಸಿ, ಅಡುಗೆ ಮಾಡಿಕೊಂಡು ಇಟ್ಟು, ಬೆಳಗ್ಗೆ ೭-೮ ಗಂಟೆ ನಡುವೆ ಸರ್ವೆ ಕಾರ್ಯ ಪ್ರಾರಂಭಿಸುತ್ತಿದ್ದೆ. ಮಧ್ಯಾಹ್ನ ೧ರಿಂದ ೨ ಅಥವಾ ೩ ಗಂಟೆಯವರೆಗೆ ಊಟ ಮಾಡುತ್ತಿದ್ದೆ. ರಾತ್ರಿ ೮ ಗಂಟೆಯವರೆಗೆ ಸರ್ವೆ ಮುಂದುವರಿಸುತ್ತಿದ್ದೆ.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ಲಾನ್ ಮಾಡಿಕೊಂಡು, ಬೆಳಗ್ಗೆ ಅವರು ಕೆಲಸಕ್ಕೆ ಹೋಗುವ ಮೊದಲು ಅವರ ಮನೆಗಳಿಗೆ ಹೋಗಿ ಸರ್ವೆ ಮುಗಿಸುತ್ತಿದ್ದೆ. ಸಂಜೆ ವೇಳೆಗೆ ಕೆಲಸ ಮುಗಿಸಿ ಬರುವವರನ್ನು ಗುರುತಿಸಿ ಅವರ ಮನೆಗಳಿಗೆ ಹೋಗಿ ಸರ್ವೆ ಮಾಡುತ್ತಿದ್ದೆ.

ಈ ರೀತಿಯಾಗಿ ನಾನು ನನಗೆ ತಾನೇ ಒಂದು ಟೈಮ್ ಟೇಬಲ್ ರೂಪಿಸಿಕೊಂಡು ಕಾರ್ಯ ನಿರ್ವಹಿಸಿದೆ. ಈ ಶ್ರದ್ಧೆಯ ಫಲವಾಗಿ, ಕೇವಲ ಮೂರು ದಿನಗಳಲ್ಲಿ ೯೦ ಮನೆಗಳ ಸರ್ವೆ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು.

ಅವರ ಈ ಸಾಧನೆಯನ್ನು ಗಮನಿಸಿದ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಶಿಕ್ಷಕಿ ಹೆಚ್. ವಸಂತಕುಮಾರಿ ಅವರನ್ನು ಕಚೇರಿಗೆ ಕರೆಯಿಸಿ ಸನ್ಮಾನಿಸಿದರು.

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಪ್ರಾರಂಭಗೊ0ಡ ಈ ಸಮೀಕ್ಷೆಯು ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದು, ಒಂದು ನಿಷ್ಠಾವಂತ ಶಿಕ್ಷಕಿ ತನ್ನ ಕರ್ತವ್ಯವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿ ಹೇಗೆ ಮಾದರಿ ಸ್ಥಾಪಿಸಬಹುದು ಎಂಬುದಕ್ಕೆ ಹೆಚ್. ವಸಂತಕುಮಾರಿ ಅವರು ಜೀವಂತ ಉದಾಹರಣೆ.

ಚಿತ್ರ : ಮೂರು ದಿನಗಳಲ್ಲಿ ೯೦ ಮನೆಗಳ ಸಾಮಾಜಿಕ ಸಮೀಕ್ಷ ನಡೆಸಿದ ಕೋಲಾರ ತಾಲ್ಲೂಕು ವಿಶ್ವನಗರ ಅನುದಾನಿತ ಶಾಲೆಯ ಶಿಕ್ಷಕಿ ಹೆಚ್. ವಸಂತಕುಮಾರಿ ರವರನ್ನು ಕೋಲಾರ ಶಿಕ್ಷಣ ಇಲಾಖೆಯ ಕ್ಲಸ್ಟರ್‌ನಿಂದ ಅಭಿನಂದಿಸಲಾಗಿಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande