ಫಿಲಿಪೈನ್ಸ್‌ನಲ್ಲಿ ಭೂಕಂಪ ; 27 ಕ್ಕೂ ಹೆಚ್ಚು ಸಾವು
ಮನಿಲಾ, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಫಿಲಿಪೈನ್ಸ್‌ನ ಸೆಬು ಪ್ರಾಂತ್ಯದ ಬೊಗೊ ನಗರದಿಂದ ಈಶಾನ್ಯಕ್ಕೆ 17 ಕಿಮೀ ದೂರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ 6.9 ತೀವ್ರತೆಯ ಭೂಕಂಪವು ಭಾರಿ ವಿನಾಶವನ್ನು ಉಂಟು ಮಾಡಿದೆ. ಈ ಭೂಕಂಪದಲ್ಲಿ ಇದುವರೆಗೆ 27 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅನೇಕರು ಗಂ
Earthquake


ಮನಿಲಾ, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಫಿಲಿಪೈನ್ಸ್‌ನ ಸೆಬು ಪ್ರಾಂತ್ಯದ ಬೊಗೊ ನಗರದಿಂದ ಈಶಾನ್ಯಕ್ಕೆ 17 ಕಿಮೀ ದೂರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ 6.9 ತೀವ್ರತೆಯ ಭೂಕಂಪವು ಭಾರಿ ವಿನಾಶವನ್ನು ಉಂಟು ಮಾಡಿದೆ. ಈ ಭೂಕಂಪದಲ್ಲಿ ಇದುವರೆಗೆ 27 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಪ್ರಾಂತೀಯ ವಿಪತ್ತು ನಿರ್ವಹಣಾ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಬೊಗೊ ನಗರದಲ್ಲೇ 13 ಜನರು ಮೃತಪಟ್ಟಿದ್ದಾರೆ. ನೆರೆಯ ಸ್ಯಾನ್ ರೆಮಿಜಿಯೊದಲ್ಲಿ 4 ಜನರು ಮೃತಪಟ್ಟಿದ್ದಾರೆ. ಉಳಿದ ಸಾವುಗಳು ಸುತ್ತಮುತ್ತಲಿನ ಗ್ರಾಮಗಳಿಂದ ವರದಿಯಾಗಿವೆ.

ಭೂಕಂಪದಿಂದ ಐತಿಹಾಸಿಕ ಚರ್ಚ್‌ಗಳು, ಮನೆಗಳು ಮತ್ತು ಅನೇಕ ಕಟ್ಟಡಗಳು ಹಾನಿಗೊಳಗಾದವು. ರಸ್ತೆಗಳ ಮೇಲೆ ಬಿರುಕುಗಳು ಉಂಟಾಗಿದ್ದು, ನಗರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಮಂಗಳವಾರ ರಾತ್ರಿ ಸಂಭವಿಸಿದ ಭೂಕಂಪದಿಂದಾಗಿ 27 ವಿದ್ಯುತ್ ಸ್ಥಾವರಗಳು ಕುಸಿದಿದ್ದು, ನ್ಯಾಷನಲ್ ಗ್ರಿಡ್ ಕಾರ್ಪೊರೇಷನ್ ಆಫ್ ದಿ ಫಿಲಿಪೈನ್ಸ್ ಬುಧವಾರ “ಹಳದಿ ಎಚ್ಚರಿಕೆ” ಹೊರಡಿಸಿದೆ.

ಸದ್ಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಪೆಸಿಫಿಕ್ ಮಹಾಸಾಗರದ “ರಿಂಗ್ ಆಫ್ ಫೈರ್” ಪ್ರದೇಶದಲ್ಲಿ ಇರುವುದರಿಂದ ಫಿಲಿಪೈನ್ಸ್ ನಿರಂತರವಾಗಿ ಭೂಕಂಪ ಮತ್ತು ಚಂಡಮಾರುತಗಳ ತೀವ್ರ ಹಾನಿಗೆ ಗುರಿಯಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande