ನವದೆಹಲಿ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಅಧ್ಯಕ್ಷ ಟ್ರಂಪ್‌ರ ಗಾಜಾ ಕುರಿತ 20 ಅಂಶಗಳ ಯೋಜನೆಗೆ ಭಾರತದ ಬೆಂಬಲ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಅವರು ಗಾಜಾ ಜನರ ಭವಿಷ್ಯ, ಸ್ಥಳೀಯ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶಗಳು ಮತ್ತು ಪ್ಯಾಲೆಸ್ಟೀನಿಯನ್ ರಾಷ್ಟ್ರ ಸ್ಥಾಪನೆಗೆ ಭಾರತದ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಆರೋಪಿಸಿದ್ದಾರೆ.
ಎಕ್ಸ ಖಾತೆಯಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಒಗ್ಗಟ್ಟನ್ನು ತೋರಿಸಿರುವುದು ಸತ್ಯವಾಗಿದ್ದರೂ, ಗಾಜಾ ಜನರ ಭಾಗವಹಿಸುವಿಕೆ ಮತ್ತು ಪ್ಯಾಲೆಸ್ಟೈನ್ ಸ್ಥಾಪನೆಯ ಕುರಿತು ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡಲಾಗಿಲ್ಲ. 1988 ರಲ್ಲಿ ಭಾರತವು ಪ್ಯಾಲೆಸ್ಟೈನ್ ರಾಜ್ಯವನ್ನು ಗುರುತಿಸಿದ್ದರೂ, ಅಮೆರಿಕ ಮತ್ತು ಇಸ್ರೇಲ್ ಈ ವಿಷಯವನ್ನು ಇನ್ನೂ ನಿರ್ಲಕ್ಷಿಸುತ್ತಿವೆ ಈ ಕುರಿತು ಭಾರತದ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa