ಬೆಂಗಳೂರು, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸನಾತನ ಧರ್ಮಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಬಿಜೆಪಿಯವರು, ಆರೆಸ್ಸೆಸ್‌ನವರು ಹುಟ್ಟಿ ನೂರು ವರ್ಷ ಆಗಿಲ್ಲ. ಅವರು ಹೇಗೆ ಧರ್ಮವನ್ನು ರಕ್ಷಣೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಧರ್ಮ ರಕ್ಷಣೆಗಾಗಿ ಮೂರು ಮಕ್ಕಳನ್ನು ಹುಟ್ಟಿಸಿ ಎಂದು ಆರೆಸ್ಸೆಸ್ ಹೇಳುತ್ತದೆ. ಅವರು ಯಾಕೆ ಬ್ರಹ್ಮಚಾರಿಗಳಾಗಿ ಉಳಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ವಿಷಮಿಸುತ್ತಿದೆ. ಯಾವ ದೇಶದೊಂದಿಗೂ ನಮ್ಮ ರಾಜತಾಂತ್ರಿಕ ಸಂಬಂಧ ಹಿಂದಿನಂತೆ ಉಳಿದಿಲ್ಲ. ಅತ್ತ ಮೋದಿಯವರ ಸ್ನೇಹಿತ ಟ್ರಂಪ್ ಟಾರಿಫ್ ಮೇಲೆ ಟಾರಿಫ್ ವಿಧಿಸುತ್ತಿದ್ದಾರೆ. ಇತ್ತ ನೋಡಿದರೆ ಬಿಜೆಪಿಯವರು ತ್ರಿಶೂಲ ದೀಕ್ಷೆ ಪಡೆಯಿರಿ ಎಂದು ಶಸ್ತ್ರಾಸ್ತ್ರ ಹಿಡಿದು ಓಡಾಡುವಂತೆ ಪ್ರಚೋದಿಸುತ್ತಿದ್ದಾರೆ. ಆರೆಸ್ಸೆಸ್ ಕೂಡ ತನ್ನದೇ ಮ್ಯಾಟ್ರಿಮೋನಿ ಮಾಡಲಿ. ತಮ್ಮ ಮಕ್ಕಳನ್ನು ಧರ್ಮ ರಕ್ಷಣೆಗೆ ಕಳುಹಿಸಲಿ. ಬಿಜೆಪಿಯ ಎಲ್ಲ ಶಾಸಕರು ತಮ್ಮ ಮಕ್ಕಳಿಗೆ ನಾಳೆ ತ್ರಿಶೂಲ ದೀಕ್ಷೆ ನೀಡಲಿ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa