ಬಳ್ಳಾರಿ : ಹೆಂಡತಿಯ ಶೀಲ ಶಂಕೆ, ಹೆಂಡತಿ ಹಾಗೂ ಮಾವನ ಕೊಲೆ
ಬಳ್ಳಾರಿ, 07 ಜುಲೈ (ಹಿ.ಸ.) ಆ್ಯಂಕರ್ : ಹೆಂಡತಿಯ ಶೀಲ ಶಂಕಿಸಿ ಗಂಡ - ಹೆಂಡತಿ ನಿತ್ಯವೂ ಜಗಳವಾಡುತ್ತಿದ್ದುದ್ದನ್ನು ಬಿಡಿಸಲು ಬಂದಿದ್ದ ಹೆಂಡತಿಯ ತಂದೆ ಮತ್ತು ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುಗ್ಗರಹಟ್ಟಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ನಡೆದಿದೆ. ಮೃತರನ್ನು ನಾಗಲಕ್
Wife and father-in-law murdered over suspicion of her husband's immorality


Wife and father-in-law murdered over suspicion of her husband's immorality


Wife and father-in-law murdered over suspicion of her husband's immorality


ಬಳ್ಳಾರಿ, 07 ಜುಲೈ (ಹಿ.ಸ.)

ಆ್ಯಂಕರ್ : ಹೆಂಡತಿಯ ಶೀಲ ಶಂಕಿಸಿ ಗಂಡ - ಹೆಂಡತಿ ನಿತ್ಯವೂ ಜಗಳವಾಡುತ್ತಿದ್ದುದ್ದನ್ನು ಬಿಡಿಸಲು ಬಂದಿದ್ದ ಹೆಂಡತಿಯ ತಂದೆ ಮತ್ತು ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುಗ್ಗರಹಟ್ಟಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ನಡೆದಿದೆ.

ಮೃತರನ್ನು ನಾಗಲಕ್ಷ್ಮೀ (24) ಹಾಗೂ ಇವರ ತಂದೆ ಶ್ರೀನಿವಾಸ (48).ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಆಗಿರುವ ತೇಜಾ (29) ಹಾಗೂ ಆತನ ತಂದೆ ಗುರುಶಂಕರ್ (50) ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರು ದೋಬಿ (ಇಸ್ತ್ರಿ)ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೇಜಾ ಮತ್ತು ನಾಗಲಕ್ಷ್ಮಿಗೆ ವಿವಾಹವಾಗಿದ್ದು, ಹೆಂಡತಿಯ ಶೀಲವನ್ನು ಶಂಕಿಸುತ್ತಿದ್ದನು. ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಗಂಡ - ಹೆಂಡತಿಯ ಜಗಳವನ್ನು ಬಿಡಿಸಲು ನಾಗಲಕ್ಷ್ಮಿ ಅವರ ತಂದೆ ಶ್ರೀನಿವಾಸ ಅವರು ತೇಜನ ಬಳಿಗೆ ಬಂದು, ಇಬ್ಬರಿಗೂ ಬುದ್ಧಿವಾದ ಹೇಳುತ್ತಿದ್ದರು.

ಆಗ, ಶ್ರೀನಿವಾಸ ಮತ್ತು ತೇಜ ಮತ್ತು ನಾಗಲಕ್ಷ್ಮಿಯ ಮಧ್ಯೆ ಮಾತಿನ ಚಕಮಕಿ ತೀವ್ರಗೊಂಡು ತೇಜನು ನಾಗಲಕ್ಷ್ಮಿ ಮತ್ತು ಶ್ರೀನಿವಾಸ ಅವರ ಮೇಲೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸಿದ ಕಾರಣ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿ, ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಪಿಎಂಸಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande