ಬಾಲೋಗುನ್ ರೆಡ್ ಕಾರ್ಡ್ ವಿವಾದ: ತೀರ್ಪುಗಾರ ಕ್ಲಾಸ್ಗೆ ಫಿಫಾ ಬೆಂಬಲ
ಮಿಯಾಮಿ, 07 ಜುಲೈ (ಹಿ.ಸ.): ಆ್ಯಂಕರ್: ಅಮೆರಿಕದ ಆಟಗಾರ ಫೋಲರಿನ್ ಬಾಲೋಗುನ್‌ಗೆ ನೀಡಿದ್ದ ರೆಡ್‌ ಕಾರ್ಡ್‌ ಕುರಿತು ಉಂಟಾದ ವಿವಾದದ ನಡುವೆ ಬ್ರೆಜಿಲ್‌ನ ತೀರ್ಪುಗಾರ ರಫೇಲ್ ಕ್ಲಾಸ್‌ ಪರ ಫಿಫಾ ದೃಢವಾಗಿ ನಿಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಪಿನ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಬ
ಬ್ರೆಜಿಲ್ನ ತೀರ್ಪುಗಾರ ರಫೇಲ್ ಕ್ಲಾಸ್


ಮಿಯಾಮಿ, 07 ಜುಲೈ (ಹಿ.ಸ.):

ಆ್ಯಂಕರ್:

ಅಮೆರಿಕದ ಆಟಗಾರ ಫೋಲರಿನ್ ಬಾಲೋಗುನ್‌ಗೆ ನೀಡಿದ್ದ ರೆಡ್‌ ಕಾರ್ಡ್‌ ಕುರಿತು ಉಂಟಾದ ವಿವಾದದ ನಡುವೆ ಬ್ರೆಜಿಲ್‌ನ ತೀರ್ಪುಗಾರ ರಫೇಲ್ ಕ್ಲಾಸ್‌ ಪರ ಫಿಫಾ ದೃಢವಾಗಿ ನಿಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಪಿನ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಬೆನ್ನಲ್ಲೇ, ಕ್ಲಾಸ್ ವಿಶ್ವದ ಅತ್ಯುತ್ತಮ ತೀರ್ಪುಗಾರರಲ್ಲಿ ಒಬ್ಬರು ಎಂದು ಫಿಫಾ ಸ್ಪಷ್ಟಪಡಿಸಿದೆ.

ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ವೀಡಿಯೊ ಸಹಾಯಕ ತೀರ್ಪುಗಾರರ ಪರಿಶೀಲನೆಯ ಬಳಿಕ ಬಾಲೋಗುನ್‌ಗೆ ರೆಡ್‌ ಕಾರ್ಡ್‌ ತೋರಿಸಲಾಗಿತ್ತು. ಬಳಿಕ ಫಿಫಾ ಒಂದು ಪಂದ್ಯದ ನಿಷೇಧವನ್ನು ಹಿಂಪಡೆದಿದ್ದು, ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ನೀಡಿದೆ.

ಈ ಕುರಿತು ಟ್ರಂಪ್ ತೀರ್ಪುಗಾರರ ಹಳೆಯ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ, ತಮ್ಮ ಆರೋಪಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯ ನೀಡಿಲ್ಲ.

ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ, ತೀರ್ಪುಗಾರರು ಮತ್ತು ಆಟದ ನಿಯಮಗಳಿಗೆ ಗೌರವ ನೀಡುವುದು ಅತ್ಯಗತ್ಯ. ತೀರ್ಪುಗಾರರಿಲ್ಲದೆ ಫುಟ್‌ಬಾಲ್ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಫಿಫಾದ ಮುಖ್ಯ ತೀರ್ಪುಗಾರ ಅಧಿಕಾರಿ ಪಿಯರ್‌ಲುಯಿಜಿ ಕೊಲ್ಲಿನಾ ಕೂಡ ರಫೇಲ್ ಕ್ಲಾಸ್ ಅನುಭವಿ ಹಾಗೂ ವಿಶ್ವಾಸಾರ್ಹ ತೀರ್ಪುಗಾರರಾಗಿದ್ದು, ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. 46 ವರ್ಷದ ಕ್ಲಾಸ್ ಇದುವರೆಗೆ 600ಕ್ಕೂ ಹೆಚ್ಚು ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande