ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಶಾಸಕ ಕೊತ್ತೂರು ಮಂಜುನಾಥ್ ಕರೆ
ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಶಾಸಕ ಕೊತ್ತೂರು ಮಂಜುನಾಥ್ ಕರೆ
ಕೋಲಾರ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಕ್ರೀಡಾ ವಿಜೇತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.


ಕೋಲಾರ, ಮೇ ೨೩ (ಹಿ.ಸ) :

ಆ್ಯಂಕರ್ : ವಿದ್ಯಾರ್ಥಿಗಳ ಭವಿಷ್ಯ ಪೆನ್ನು, ಪುಸ್ತಕದ ಮೇಲಿದೆ. ಅದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಒಳ್ಳೆಯ ಉದ್ಯೋಗ ಪಡೆದು ಜೀವನ ನಡೆಸಿದಾಗ ಮಾತ್ರವೇ ತಂದೆ, ತಾಯಿ,ಹಾಗೂ ಗುರುಗಳಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು

ನಗರದ ಟಿ.ಚೆನ್ನಯ್ಯ ರಂಗಮ0ದಿರದಲ್ಲಿ ಶನಿವಾರ ಸರ್ಕಾರಿ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪುಸ್ತಕವನ್ನು ತಾಯಿ ರೀತಿ, ಪೆನ್ನು ತಂದೆ ರೀತಿ, ಹೃದಯವನ್ನು ಗುರುಗಳ ಸ್ಥಾನದಲ್ಲಿ ನೋಡಬೇಕು ಇವರು ಯಾವತ್ತೂ ಕೆಟ್ಟದ್ದು ಬಯಸಲ್ಲ ಒಳ್ಳೆಯದನ್ನು ಕಲಿಸಿಕೊಡುತ್ತಾರೆ ಅದನ್ನು ಬುದ್ಧಿವಂತಿಕೆಯ ರೀತಿಯಲ್ಲಿ ಜೀವನದ ದಾರಿಗಳನ್ನು ತಾವಾಗಿಯೇ ಹುಡುಕಿಕೊಳ್ಳಬೇಕಾಗಿದೆ ಎಂದರು

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಸುಮಾರು ೧೦೩ ಕೋಟಿ ಅನುದಾನವನ್ನು ಬರೀ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಉಸ್ತುವಾರಿ ಸಚಿವ ಬೈರತಿ ಸುರೇಶ್,ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ನೀಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ನಿಮ್ಮ ಜೊತೆಗೆ ಪಕ್ಷಾತೀತವಾಗಿ ಇರತ್ತೇನೆ ನೀವು ಯಾರು ಕೂಡ ರಾಜಕಾರಣಕ್ಕೆ ಬರಬೇಡಿ ಕಣ್ಣುಮುಂದೆ ೧೦% ಜನ ಗೌರವ ಕೊಟ್ಟರೆ ಉಳಿದ ೯೦% ಜನ ಹಿಂದೆ ಬೈದುಕೊಳ್ಳತ್ತಾರೆ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ರಾಜಕಾರಣಕ್ಕೆ ಬೆಲೆ ಇಲ್ಲ ಎಂದರು.

ಸ0ಸದ ಎಂ ಮಲ್ಲೇಶ್ ಬಾಬು ಮಾತನಾಡಿ ಮಹಿಳಾ ಕಾಲೇಜಿನ ವಿಧ್ಯಾರ್ಥಿಗಳು ಓದಿನಲ್ಲೂ ಹಾಗೂ ಕ್ರೀಡೆ ಎರಡರಲ್ಲೂ ಸಾಧನೆ ಮಾಡಿದ್ದಾರೆ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಹೆಣ್ಣು ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಧ್ಯತೆ ನೀಡಿದ್ದಾರೆ ಶಿಕ್ಷಣ ಪಡೆದರೆ ಅದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ೨೪ ವರ್ಷದ ಶಿಕ್ಷಣ ಮುಂದೆ ಒಳ್ಳೆಯ ಭವಿಷ್ಯ ಕಾಣಬಹುದಾಗಿದೆ ಎಂದರು

ಎ0ಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಮಹಿಳಾ ಕಾಲೇಜಿಗೆ ಇತಿಹಾಸವಿದೆ ಖಾಸಗಿ ಕಾಲೇಜುಗಳ ವ್ಯಾಮೋಹದ ಮಧ್ಯೆ ಸುಮಾರು ೩೦೦೦ ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಇಂತಹ ಕಾಲೇಜಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ೪೨.೫೦ ಕೋಟಿ ಅನುದಾನದಲ್ಲಿ ಹೊಸ ಕಟ್ಟಡ ಕಟ್ಟಲು ಮುಂದಾಗಿದ್ದು ಇದ್ದಕ್ಕೆ ಪುರಾತತ್ತ್ವ ಇಲಾಖೆಯಿಂದ ಕಾನೂನು ಅಡ್ಡಿ ಬಂದಿದೆ ಈ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿ ಇದ್ದು ಸಂಸದ ಮಲ್ಲೇಶ್ ಬಾಬು ಗಮನ ಹರಿಸಿ ಕಾನೂನು ತೊಡಕು ಸರಿ ಪಡಿಸಬೇಕು ಎಂದರು

ಕೋಲಾರ ಜಿಲ್ಲೆಯಲ್ಲಿ ಹಿಂದೆ ಮಹಿಳಾ ಅಧಿಕಾರಿಗಳೇ ಪ್ರಮುಖ ಸ್ಥಾನದಲ್ಲಿ ಇದ್ದರು ಇವತ್ತು ಪೋಲಿಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶಿಲ್ದಾರ್ ಮಹಿಳೆಯರು ಇದ್ದರು ಯಾರು ಕೂಡ ಇಂತಹ ಮಹಿಳಾ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ ವಿಧ್ಯಾರ್ಥಿಗಳು ಸಹ ತಮ್ಮ ಅಮೂಲ್ಯ ಸಮಯವನ್ನು ಆಳು ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ ದೇಶದಲ್ಲಿ ಮಹಿಳೆಯರಿಗೂ ಸಮಾನತೆ ತಂದಿದ್ದು ದಿವಂಗತ ರಾಜೀವ್ ಗಾಂಧಿ ಅದೇ ರೀತಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಸೋನಿಯಾ ಗಾಂಧಿ ಪ್ರಮುಖ ಕಾರಣವಾಗಿದ್ದರು ಉದ್ಯೋಗ ಎಲ್ಲಾ ಕ್ಷೇತ್ರದಲ್ಲಿ ಇದೆ ಅದನ್ನು ಕೌಶಲ್ಯದ ಮೂಲಕ ಬಳಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಆರ್ ಶ್ರೀನಿವಾಸಯ್ಯ ಅವರನ್ನು ಸನ್ಮಾನಿಸಲಾಯಿತು ವಿವಿಧ ಕ್ರೀಡೆಗಳಲ್ಲಿ ಜಯಶೀಲರಾದವರಿಗೆ ಪ್ರಶಸ್ತಿ ಹಾಗೂ ಪಾರಿತೋಷಕ ನೀಡಿದರು, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್, ಮಹಿಳಾ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಗೌಡ, ಕಾಲೇಜು ಸಮಿತಿ ಸದಸ್ಯರಾದ ರಘು, ಚಿನ್ನಾಪುರ ನಾರಾಯಣಸ್ವಾಮಿ, ವಿಜಯನಗರ ಮಂಜುನಾಥ್, ಕೆಡಿಪಿ ಸದಸ್ಯ ಯಲವಾರ ರಾಜಕುಮಾರ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande