ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೆಂಕಟಾಚಲಪತಿಗೌಡ ಆಯ್ಕೆ
ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೆಂಕಟಾಚಲಪತಿಗೌಡ ಆಯ್ಕೆ
ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೆಂಕಟಾಚಲಪತಿಗೌಡ ಮತ್ತು ಇತರೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.


ಕೋಲಾರ, ೨೩ ಮೇ (ಹಿ.ಸ) :

ಆ್ಯಂಕರ್ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ನೆರ್ನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರೂ ಆದ ಬಿ.ಎಸ್.ವೆಂಕಟಾಚಲಪತಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಚೌಡದೇನಹಳ್ಳಿ ಶಾಲೆಯ ಶಿಕ್ಷಕ ಬಿ.ಸತೀಶ್, ಉಪಾಧ್ಯಕ್ಷರುಗಳಾಗಿ ನಗರದ ಕೋಟೆಯ ಉರ್ದು ಶಾಲೆ ಶಿಕ್ಷಕ ಅಯಾಜ್ ಅಹಮದ್, ವಕ್ಕಲೇರಿ ಶಾಲೆಯ ವಿ.ಭಾಗ್ಯಲಕ್ಷö್ಮಮ್ಮ ಹಾಗೂ ಖಜಾಂಚಿಯಾಗಿ ಸೀತಿ ಸರ್ಕಾರಿ ಶಾಲೆಯ ಟಿ.ಎನ್.ಅಶ್ವಥ್ಥಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಮತೆ ಸಂಘದ ಸಹಕಾರ್ಯದರ್ಶಿಗಳಾಗಿ ಮೈಲಾಂಡಹಳ್ಳಿ ಶಾಲೆಯ ಆರ್.ಸವಿತಾ, ಮಟ್ನಹಳ್ಳಿ ಶಾಲೆಯ ಎಂ.ವಿ.ಸುಬ್ರಹ್ಮಣ್ಯA, ಸಂಘಟನಾಕಾರ್ಯದರ್ಶಿಗಳಾಗಿ ಐತರಾಸನಹಳ್ಳಿ ಶಾಲೆಯ ಸಿ.ಮುನಿರಾಜ, ಬೆಗ್ಲಿ ಬೆಣಜೇನಹಳ್ಳಿಶಾಲೆಯ ವಿ.ಮಂಜುಳಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವೆಂಕಟಾಚಲಪತಿಗೌಡ ಮಾತನಾಡಿ, ಶಿಕ್ಷಕರು ನಮ್ಮ ಮೇಲೆ ನಂಬಿಕೆಯಿಟ್ಟು ಗೆಲ್ಲಿಸಿದ್ದಾರೆ ಅವರ ಆಶಯಗಳಿಗೆ ಕುತ್ತು ತರುವುದಿಲ್ಲ, ನಂಬಿಕೆ ಉಳಿಸಿಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಶಿಕ್ಷಕರಿಗೆ ತಿಂಗಳ ಒಂದನೇ ತಾರೀಖು ವೇತನ ಬಟವಾಡೆ, ಅನುದಾನ ಬಿಡುಗಡೆ, ವೈದ್ಯಕೀಯ ಬಿಲ್ಲುಗಳ ಮಂಜೂರು, ಸೇವಾ ಪುಸ್ತಕ ದಾಖಲು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ಅವರ ಬೆನ್ನಲುಬಾಗಿ ನಿಲ್ಲುವುದಾಗಿ ತಿಳಿಸಿದ ಅವರು, ಶಿಕ್ಷಕರ ಹಿತ ಕಾಯಲು ಬದ್ದತೆಯಿಂದ ಕೆಲಸ ಮಾಡುವ ಭರವಸೆ ನೀಡಿದರು.

ನೂತನ ಅಧ್ಯಕ್ಷರಿಗೆ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ನೂರಾರು ಶಿಕ್ಷಕರು ಅಭಿನಂದನೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande