ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ನವದೆಹಲಿ, 23 ಮೇ (ಹಿ.ಸ.) : ಆ್ಯಂಕರ್ : ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ದರಗಳ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 91 ಪೈಸೆ ಏರಿಕೆಯಾಗಿದೆ. ಜೊತೆಗೆ ದೆಹಲಿ–ಎನ್ಸಿಆ
File photo


ನವದೆಹಲಿ, 23 ಮೇ (ಹಿ.ಸ.) :

ಆ್ಯಂಕರ್ : ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ದರಗಳ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 91 ಪೈಸೆ ಏರಿಕೆಯಾಗಿದೆ. ಜೊತೆಗೆ ದೆಹಲಿ–ಎನ್ಸಿಆರ್ ಪ್ರದೇಶದಲ್ಲಿ ಸಿಎನ್ಜಿ ದರವನ್ನು ಪ್ರತಿ ಕೆಜಿಗೆ ₹1 ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ಸೈಟ್ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ ₹99.51ಕ್ಕೆ ಏರಿಕೆಯಾಗಿದೆ. ಅದೇ ವೇಳೆ ಡೀಸೆಲ್ ದರ ₹92.49ಕ್ಕೆ ತಲುಪಿದೆ.

ಕಳೆದ ಒಂಬತ್ತು ದಿನಗಳಲ್ಲಿ ಇದು ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಮೇ 15ರಿಂದ ಆರಂಭವಾದ ದರ ಪರಿಷ್ಕರಣೆ ಸರಣಿಯಿಂದ ಒಟ್ಟಾರೆ ಇಂಧನ ದರವು ಲೀಟರ್ಗೆ ಸುಮಾರು ₹5ರವರೆಗೆ ಹೆಚ್ಚಾಗಿದೆ.

ಮೇ 15ರಂದು ಮೊದಲ ಹಂತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ಗೆ ₹3 ಹೆಚ್ಚಿಸಲಾಗಿತ್ತು. ಬಳಿಕ ಮೇ 19ರಂದು ಎರಡನೇ ಬಾರಿ ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮೂರನೇ ಬಾರಿ ಮತ್ತೆ ದರ ಏರಿಕೆ ಜಾರಿಯಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾದ ಹೆಚ್ಚುವರಿ ಹೊರೆವನ್ನು ಹಂತ ಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.

ಇದರ ಜೊತೆಗೆ ದೆಹಲಿ–ಎನ್ಸಿಆರ್ನಲ್ಲಿ ಸಿಎನ್ಜಿ ದರವನ್ನೂ ಪ್ರತಿ ಕೆಜಿಗೆ ₹1 ಹೆಚ್ಚಿಸಲಾಗಿದ್ದು, ಹೊಸ ದರದಂತೆ ಸಿಎನ್ಜಿ ಪ್ರತಿ ಕೆಜಿಗೆ ₹81.09ಕ್ಕೆ ಲಭ್ಯವಾಗಲಿದೆ. ಕಳೆದ ಹತ್ತು ದಿನಗಳಲ್ಲಿ ಸಿಎನ್ಜಿ ದರ ಏರಿಕೆಯಾದದ್ದು ಇದು ಮೂರನೇ ಬಾರಿ ಎಂಬುದು ಗಮನಾರ್ಹ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande