
ಚೆನೈ, 04 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೂ, ನಿಧಾನಗತಿಯ ಓವರ್ ದರದ ಕಾರಣ ತಂಡಕ್ಕೆ ಹಿನ್ನಡೆಯಾಗಿದೆ. ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ₹24 ಲಕ್ಷ ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ, ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಮಾಡಿದ ಎರಡನೇ ತಪ್ಪಾಗಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ತಂಡದ ಉಳಿದ ಆಟಗಾರರು ಮತ್ತು ಇಂಪ್ಯಾಕ್ಟ್ ಆಟಗಾರರಿಗೆ ₹6 ಲಕ್ಷ ಅಥವಾ ಪಂದ್ಯ ಶುಲ್ಕದ 25% ರಷ್ಟು ದಂಡ ವಿಧಿಸಲಾಗಿದೆ.
ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣನಲ್ಲಿ ನಡೆದ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ 210 ರನ್ಗಳ ಕಠಿಣ ಗುರಿಯನ್ನು ಕೇವಲ 18.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಲುಪಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಇದು ತಂಡದ ಸತತ ಎರಡನೇ ಜಯವಾಗಿದೆ.
ನಾಯಕ ಶ್ರೇಯಸ್ ಅಯ್ಯರ್ 29 ಎಸೆತಗಳಲ್ಲಿ 50 ರನ್ ಗಳಿಸಿ ತಂಡವನ್ನು ಮುನ್ನಡೆಸಿದರು. ಇಂಪ್ಯಾಕ್ಟ್ ಆಟಗಾರ ಪ್ರಿಯಾಂಶ್ ಆರ್ಯ ಕೇವಲ 11 ಎಸೆತಗಳಲ್ಲಿ 39 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 209/5 ರನ್ಗಳ ಭರ್ಜರಿ ಮೊತ್ತ ದಾಖಲಿಸಿತು. ಯುವ ಆಟಗಾರ ಆಯುಷ್ ಮ್ಹಾತ್ರೆ 73 ರನ್ ಗಳಿಸಿದರೆ, ಶಿವಂ ದುಬೆ ಅಜೇಯ 45 ರನ್ ಗಳಿಸಿದರು.
ಆದರೆ ಪ್ರಮುಖ ಬೌಲರ್ ಮಥಿಶಾ ಪತಿರಾನ ಅವರ ಗೈರುಹಾಜರಿ ತಂಡಕ್ಕೆ ಹೊಡೆತ ನೀಡಿತು. ಗುರಿ ರಕ್ಷಿಸುವಲ್ಲಿ ಬೌಲರ್ಗಳು ವಿಫಲರಾದರು.
ಪಂಜಾಬ್ ಪರ ವಿಜಯಕುಮಾರ್ ವೈಶಾಖ್ ಎರಡು ವಿಕೆಟ್ ಪಡೆದು ಸಿಎಸ್ಕೆ ರನ್ಗಟ್ಟುವಿಕೆಯನ್ನು ನಿಯಂತ್ರಿಸಿದರು.
ಅದ್ಭುತ ಪ್ರದರ್ಶನದ ನಡುವೆಯೇ ನಿಧಾನಗತಿಯ ಓವರ್-ರೇಟ್ ನಿಯಮ ಉಲ್ಲಂಘನೆ ಪಂಜಾಬ್ ಕಿಂಗ್ಸ್ ಸಂಭ್ರಮಕ್ಕೆ ನೆರಳಾಯಿತು. ಆದರೂ ತಂಡದ ಒಟ್ಟು ಪ್ರದರ್ಶನ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa