ಕಾನೂನು ರೀತಿಯಲ್ಲಿ ಕ್ರಮ ವಹಿಸಿದರೆ ಡಾಂಬರೀಕರಣಕ್ಕೆ ಅವಕಾಶ ನೀಡುವೆ : ಕುರ್ಕಿ ರಾಜೇಶ್ವರಿ
ಕೋಲಾರ, ಫೆಬ್ರವರಿ೨೦ (ಹಿ.ಸ) : ಆ್ಯಂಕರ್ : ತಾಲ್ಲೂಕಿನ ನರಸಾಪುರದ ದ್ವಿಪಥ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ತಿಳಿಸಿದರು.
ಚಿತ್ರ ; ಕೋಲಾರ ತಾಲ್ಲೂಕಿನ ನರಸಾಪುರದ ದ್ವಿಪಥ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ಕೋಲಾರ, ಫೆಬ್ರವರಿ೨೦ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ನರಸಾಪುರದ ದ್ವಿಪಥ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ತಿಳಿಸಿದರು.

ಗ್ರಾಮದ ತಮ್ಮ ಜಾಗಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಡಾಂಬರೀಕರಣಕ್ಕೆ ತಡೆಯಾಜ್ಞೆ ತಂದಿರುವ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಆಸ್ತಿ ಮೇಲೆ ಆರೋಪ ಮಾಡಿ ಖಾತೆ ರದ್ದು ಮಾಡಿ ಜಾಗ ತೆಗೆದುಕೊಂಡಿದ್ದಾರೆ. ಏಕಾಏಕಿ ಕೆಲಸ ಮಾಡಲು ಮುಂದಾದರು. ಬಲವಂತವಾಗಿ ಜಾಗ ತೆಗೆದುಕೊಳ್ಳುಲು ಮುಂದಾದರು. ಇದು ಮನಸ್ಸಿಗೆ ನೋವುಂಟು ಮಾಡಿತು. ನಾವೇ ಒತ್ತುವರಿ ಮಾಡಿಕೊಂಡಿದ್ದೇವೆ ಎಂದರ್ಥ ಬರುತ್ತದೆ. ಅವಮಾನ ಆಗುವಂಥ ವಿಚಾರ. ಹೀಗಾಗಿ, ನಮ್ಮ ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ತಂದಿದ್ದೇನೆ. ನಮ್ಮ ಆಸ್ತಿ ಉಳಿಸಿಕೊಳ್ಳಲು ಈ ಕ್ರಮ ವಹಿಸಿದೆ ಎಂದರು.

ಕೆಲವರು ಎಸಗಿದ ತಪ್ಪಿನಿಂದ ಈ ಸಮಸ್ಯೆ ಸೃಷ್ಟಿಯಾಯಿತು. ಐದಾರು ತಿಂಗಳಿನಿಂದ ರಸ್ತೆ ಕಾರ್ಯ ನಿಂತಿತ್ತು. ಈ ಕಾರಣ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಯಿತು. ದೂಳು ನಿರ್ಮಾಣವಾಯಿತು. ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೋಸ್ ವರಿಷ್ಠಾಧಿಕಾರಿ ವರೆಗೆ ಹೋಗಬೇಕಾಯಿತು ಎಂದು ಹೇಳಿದರು.

ಕೆಲವರು ನಮ್ಮಿಂದಾಗಿ ಕೆಲಸ ಸ್ಥಗಿತಗೊಂಡಿದೆ ಎಂದು ಭಾವಿಸಿದ್ದರು. ನಾನು ಯಾವತ್ತೂ ರಸ್ತೆ ನಿರ್ಮಾಣಕ್ಕೆ ವಿರೋಧಿ ಅಲ್ಲ.ಈ ವಿಚಾರ ಹೆಚ್ಚಿನವರಿಗೆ ಗೊತ್ತಿದೆ. ಖಾತೆ ರದ್ದು ಮಾಡಿದ್ದಕ್ಕೆ ನ್ಯಾಯಾಲಯ ಮೊರೆಹೋದೆ. ನನಗೆ ನಮ್ಮ ಜನ ಮುಖ್ಯ ಅವರಿಗಾಗಿ ಜಾಗ ಬಿಟ್ಟು ಕೊಡಲು ಸಿದ್ಧ. ಆದರೆ, ಹಾಗೆಯೇ ಕೊಟ್ಟರೆ ತಪ್ಪು ನಮ್ಮದು ಎಂದಾಗುತ್ತದೆ. ಈ ಜಾಗದ ಸಂಬಂಧ ಮತ್ತೆ ನಮ್ಮ ಹೆಸರಿಗೆ ಖಾತೆ ಮಾಡಬೇಕು. ಹೀಗಾಗಿ, ಕಾನೂನಾತ್ಮಕವಾಗಿ ಸರ್ಕಾರದಿಂದ ಪರಿಹಾರ ಪಡೆದು ಜಾಗ ಬಿಟ್ಟು ಕೊಡುತ್ತೇವೆ. ಅದಕ್ಕೆ ತಮ್ಮಂದಿರು ಒಪ್ಪಿದ್ದಾರೆ. ಈ ವಿಚಾರವನ್ನು ಎಇಇ ಮಂಜುನಾಥ್ ಇದ್ದಾಗಲೇ ಚರ್ಚಿಸಲಾಗಿತ್ತು. ಆದರೆ, ಏಕೆ ಖಾತೆ ರದ್ದು ಮಾಡಿದರೋ ಗೊತ್ತಿಲ್ಲ ಎಂದು ತಿಳಿಸಿದರು.

ಈಗ ನಿರ್ಮಾಣ ಮಾಡುತ್ತಿರುವ ರಸ್ತೆಗೆ ಈಗಲೂ ಚರಂಡಿ ಇಲ್ಲ. ಪಾದಚಾರಿ ಮಾರ್ಗ ಇಲ್ಲ. ಹೀಗಾಗಿ, ಈಗಲೂ ನ್ಯಾಯಾಲಯಕ್ಕೆ ಹೋಗಿ ರಸ್ತೆ ಕಾಮಗಾರಿ ನಿಲ್ಲಿಸಬಹುದು. ಆದರೆ ನಾನು ಆ ರೀತಿ ಮಾಡಲ್ಲ. ಕೆಲವರು ಅಧಿಕಾರವಿದೆ , ಸರ್ಕಾರ ನಮ್ಮದಿದೆ ಎಂದು ದರ್ಪ ತೋರಿಸಲು ಮುಂದಾಗಿದ್ದಾರೆ. ಅಕ್ರಮವಾಗಿ ಖಾತೆ ರದ್ದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಈಗಲೇ ಜಾಗ ಬಿಟ್ಟುಕೊಡಲು ಆಗಲ್ಲ. ಅದು ಕಾನೂನು ಪ್ರಕ್ರಿಯೆ ಮೂಲಕವೇ ಆಗಬೇಕಿದೆ . ಖಾತೆ ನಮ್ಮ ಹೆಸರಿಗೆ ಮತ್ತೆ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಜೊತೆಗೆ ಇದ್ದರು.

ಚಿತ್ರ ; ಕೋಲಾರ ತಾಲ್ಲೂಕಿನ ನರಸಾಪುರದ ದ್ವಿಪಥ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande