
ವಿಜಯಪುರ, 20 ಫೆಬ್ರವರಿ (ಹಿ.ಸ.):
ಆ್ಯಂಕರ್: ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ನಗರದ ಎಲ್.ಬಿ.ಎಸ್ ಮಾರುಕಟ್ಟೆಗೆ ಭೇಟ ನೀಡಿ ಪರಿಶೀಲನೆ ನಡೆಸಿದ ಅವರು, ಮಾರುಕಟ್ಟೆ ಸುತ್ತಲೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ಸ್ವಚ್ಚತೆಗೆ ಹೆಚ್ಚು ಗಮನ ಹರಿಸಬೇಕು. ಎಲ್.ಬಿ.ಎಸ್ ಮಾರುಕಟ್ಟೆ, ನೆಹರು ಮಾರ್ಕೆಟ್, ಗಾಂಧಿ ವೃತ್ತ, ಹಣ್ಣು ತರಕಾರಿ ವ್ಯಾಪಾರಸ್ತರು ರಸ್ತೆಯಲ್ಲಿ ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ವ್ಯಾಪಾರಸ್ತರಿಗಾಗಿ ನಿಗದಿತ ಗುರುತಿಸಿದ ಸ್ಥಳಗಳಲ್ಲಿ ವ್ಯಾಪಾರ ಮಾಡುವಂತೆ ತಿಳಿಸಬೇಕು.ಈಗಾಗಲೇ ನೆಹರು ಮಾರುಕಟ್ಟೆ ಹತ್ತಿರ ನಿರ್ಮಿಸಲಾಗಿರುವ ಮಳಿಗೆಗಳನ್ನು ಗುರುತಿಸಿದ ವ್ಯಾಪಾರಸ್ಥರಿಗೆ ವಿತರಿಸಿ ವಹಿವಾಟು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು ಗ್ರಂಥಾಲಯಕ್ಕೆ ವಾಚನಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ಸಮರ್ಪಕವಾದ ಕುಡಿಯುವ ನೀರು, ಗ್ರಂಥಾಲಯದ ಸುತ್ತ-ಮುತ್ತ ಸ್ವಚ್ಚತೆ ಕಾಪಾಡಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ನಗರದ ಪುಡ್ ಕೋರ್ಟ್ ಝೋನ್, ಸೊಲ್ಲಾಪುರ ರಸ್ತೆ, ಇಬ್ರಾಹಿಂಪೂರ ರಸ್ತೆಗೆ ಹೊಂದಿಕೊಂಡಿರವ ಮೇಲ್ಸೆತುವೆ ಕೆಳಗೆ ಹಾಗೂ ಪಕ್ಕದ ಖಾಲಿ ಇರುವ ಸ್ಥಳ ಪರಿಶೀಲಿಸಿದ ಅವರು, ಅಂದಾಜು ಯೋಜನೆ ತಯಾರಿಸುವಂತೆ ಆಯುಕ್ತರಿಗೆ ಸೂಚಿಸಿದರು. ಶಿವಾಜಿ ವೃತ್ತದಲ್ಲಿರುವ ಕೋಟೆಗೋಡೆ, ಮನಗೂಳಿ ರಸ್ತೆಯಿಂದ ಸಿಂದಗಿ ರೈಲ್ವೆ ಸೇತುವೆವರೆಗಿನ ಕಂದಕವನ್ನು ಸ್ವಚ್ಚತೆ ಹಾಗೂ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಅವರು ಮುಂಬರುವ ದಿನಗಳಲ್ಲಿ ಈ ಸ್ಥಳವನ್ನು ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ,
ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಪಾಲಿಕೆ ಆರೋಗ್ಯಾಧಿಕಾರಿ ಎಸ್ ಎಲ್ ಲಕ್ಕಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande