‘ತೆನಾಲಿ ಡಿಎ ಎಲ್ಎಲ್ ಬಿ’ ಚಿತ್ರಕ್ಕೆ ಹೊಸ ಮುಖಗಳ ಹುಡುಕಾಟ
ಬೆಂಗಳೂರು, 13 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಕಥಾಹಂದರದ ಚಿತ್ರವಾಗಿ ಮೂಡಿ ಬರುತ್ತಿರುವ ‘ತೆನಾಲಿ ಡಿಎ ಎಲ್ಎಲ್ ಬಿ’ ಸಿನಿಮಾಗಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಗಿದೆ. ಈ ಚಿತ್ರದಲ್ಲಿ ಹಾಸ್ಯನಟ ಕೋಮಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನ
Da llb


ಬೆಂಗಳೂರು, 13 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಕಥಾಹಂದರದ ಚಿತ್ರವಾಗಿ ಮೂಡಿ ಬರುತ್ತಿರುವ ‘ತೆನಾಲಿ ಡಿಎ ಎಲ್ಎಲ್ ಬಿ’ ಸಿನಿಮಾಗಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಗಿದೆ. ಈ ಚಿತ್ರದಲ್ಲಿ ಹಾಸ್ಯನಟ ಕೋಮಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಿರ್ದೇಶನವನ್ನು ಸಿದ್ರುವ್ ಸಿದ್ದು ವಹಿಸಿಕೊಂಡಿದ್ದಾರೆ.

ಚಿತ್ರ ತಂಡ ಈಗಾಗಲೇ ಆಡಿಷನ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅಭಿನಯ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಲು ಬಯಸುವ ಹೊಸ ಮುಖಗಳಿಗೆ ಇದು ಸುವರ್ಣಾವಕಾಶವಾಗಿದೆ. ಹಾಸ್ಯಭರಿತ ನ್ಯಾಯಾಲಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ವಿಭಿನ್ನ ಪಾತ್ರಗಳಿಗೆ ತಕ್ಕ ಪ್ರತಿಭಾವಂತರನ್ನು ಆಯ್ಕೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ನಿರ್ಮಾಣ ತಂಡ ತಿಳಿಸಿದೆ.

‘ತೆನಾಲಿ DA LLB’ ಶೀರ್ಷಿಕೆ ಕುತೂಹಲ ಕೆರಳಿಸಿದ್ದು, ನ್ಯಾಯಾಲಯದ ಸನ್ನಿವೇಶಗಳನ್ನು ಹಾಸ್ಯಮಯವಾಗಿ ಚಿತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೊಸಬರಿಗೆ ಮಾತ್ರವಲ್ಲದೆ, ರಂಗಭೂಮಿ ಹಾಗೂ ಕಿರುತೆರೆ ಹಿನ್ನೆಲೆಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

ಆಡಿಷನ್‌ಗೆ ಭಾಗವಹಿಸಲು ಇಚ್ಛಿಸುವವರು ತಮ್ಮ ಪ್ರೊಫೈಲ್ ಮತ್ತು ಫೋಟೋಗಳನ್ನು ಸಲ್ಲಿಸುವಂತೆ ಚಿತ್ರತಂಡ ಮನವಿ ಮಾಡಿದೆ. ಆಯ್ಕೆಯಾದವರಿಗೆ ನೇರ ಆಡಿಷನ್‌ಗೆ ಕರೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದ್ದು, ‘ತೆನಾಲಿ DA LLB’ ಮೂಲಕ ಮತ್ತೊಮ್ಮೆ ನಗೆರಸವನ್ನು ಪಸರಿಸಲು ತಂಡ ಸಜ್ಜಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande