ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಅಕ್ಟೋಬರ್ 14 ರಿಂದ 18ರ ವರೆಗೆ ಸಂಶೋಧನಾ ವಿಧಾನ ಮತ್ತು ದತ್ತಾಂಶ ವಿಶ್ಲೇಷಣೆ ಕುರಿತು ಐದು ದಿನಗಳ ಕಾರ್ಯಾಗಾರವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ. ಯು.ಆರ್ ರಾವ್ ವಿಜ್ಞಾನ ಭವನ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿಕೆವಿಕೆ, ದೊಡ್ಡ ಬೆಟ್ಟಹಳ್ಳಿ ಲೇಯೊಟ್, ವಿದ್ಯಾರಣ್ಯಪುರ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ, ಸಂಶೋಧನಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು/ಪ್ರಾಧ್ಯಾಪಕರು ಭಾಗವಹಿಸಬಹುದು.
ಆಸಕ್ತರು ಅಕ್ಟೋಬರ್ 13 ರೊಳಗಾಗಿ (Google https://forms.gle/UNrBg9wiBzgQBMVD6) ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಜಾಲತಾಣ : http://www.kstacademy.in ಅಥವಾ ವೈಜ್ಞಾನಿಕಾಧಿಕಾರಿ ವಿ. ಕೆ ಶ್ರೀನಿವಾಸು ಅವರನ್ನು (ಮೊ.ಸಂ: 9620767819) ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa