ಕೋಲಾರ, ೨0 ಜುಲೈ (ಹಿ.ಸ.) :
ಆ್ಯಂಕರ್ : ಕೋಲಾರ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಶ್ರೀನಿವಾಸ್, ಉಪಾಧ್ಯಕ್ಷರಾಗಿ ವಿ.ಸುಬ್ರಮಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ.ಆದರ್ಶ ಆಯ್ಕೆಯಾದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ೭-೩೦ ರಿಂದ ಮಧ್ಯಾಹ್ನ ೨-೩೦ರವರೆಗೂ ನಡೆದ ಮತದಾನದ ನಂತರ ಮತ ಎಣಿಕೆ ಕಾರ್ಯ ಮುಗಿದ ನಂತರ ನೂತನ ಪದಾಧಿಕಾರಿಗಳನ್ನು ಚುನಾವಣಾಧಿಕಾರಿ ಸೋಮಣ್ಣ ಘೋಷಿಸಿದರು.
ಒಟ್ಟು ೫೭೪ ಮಂದಿ ವಕೀಲ ಮತದಾರರಿದ್ದು, ಅಧ್ಯಕ್ಷ ಸ್ಥಾನಕ್ಕೆ ೮ ಮಂದಿ ಕಣದಲ್ಲಿದ್ದು, ಎಲ್.ಶ್ರೀನಿವಾಸ್ ೨೫೧ ಮತಗಳನ್ನು ಪಡೆದು ಆಯ್ಕೆಯಾದರು. ಉಳಿದಂತೆ ಬೈರೇಗೌಡ ೯೬, ಎಸ್.ಡಿ.ಚೌಡೇಗೌಡ ೧೪೦, ಎಂ.ಪಿ.ನಾರಾಯಣಸ್ವಾಮಿ ೧೯, ಸಿ.ರಾಮಕೃಷ್ಣ೪೩, ಎಂ.ಆರ್.ರತ್ನಮ್ಮ ೫, ವೆಂಕಟಾಚಲಪತಿ೧, ವೆಂಕಟೇಶಪ್ರಸಾದ್ ೬ ಮತಗಳನ್ನು ಪಡೆದಿದ್ದು ಎಲ್.ಶ್ರೀನಿವಾಸ್ ೧೧೧ ಮತಗಳ ಅಂತರದಿಂದ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಕಣದಲ್ಲಿದ್ದು,೨೩೬ ಮತ ಪಡೆದ ಹೆಚ್.ವಿ.ಸುಬ್ರಮಣಿ ೫೦ ಮತಗಳ ಅಂತರದಿಂದ ಆಯ್ಕೆಯಾದರು. ಉಳಿದಂತೆ ನಿತೀಶ್ ೧೮೬ ಹಾಗೂ ವಿ.ಶ್ರೀಕಾಂತ್ ೧೪೦ ಮತ ಪಡೆದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ೨೩೦ ಮತ ಪಡೆದ ಕೆ.ವಿ.ಆದರ್ಶ್ ಆಯ್ಕೆಯಾಗಿದ್ದು, ಅವರ ಪ್ರತಿಸ್ಪರ್ಧಿಗಳಾದ ಹೆಚ್.ವಿ.ಕೃಷ್ಣೇಗೌಡ ೧೪೫ಮತ, ಎನ್.ಮಂಜುನಾಥ್ ೧೨೯ ಹಗೂ ಸತೀಶ್ ಕುಮಾರ್ ೬೦ ಮತ ಪಡೆದಿದ್ದು, ಆದರ್ಶ ೮೦ ಮತಗಳ ಅಂತರದಿಂದ ಆಯ್ಕೆಯಾದರು.
ಖಜಾಂಚಿ ಸ್ಥಾನಕ್ಕೆ ಇಬ್ಬರು ಕಣದಲ್ಲಿದ್ದು, ಪಿ.ಗಾಯತ್ರಿ ೩೦೬ ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಅವರ ಪ್ರತಿಸ್ಪರ್ಧಿ ಸಂಪತ್ ಕುಮಾರ್ ೨೫೭ ಮತ ಪಡೆದರು.
ಉಳಿದಂತೆ ಕಾರ್ಯಕಾರಿ ಸಮಿತಿಗೆ ವಕೀಲರಾದ ವಿ.ಅಂಬರೀಶ, ಎನ್.ಭಗತ್‌ವರ್ಮ, ಜಿ.ಕೆ.ಲೋಕೇಶ್, ಎಂ.ವಿ.ಲೋಕೇಶ್‌ಗೌಡ, ಕೆ.ಮಂಜುನಾಥ್, ಎಂ.ಸತೀಶ್ ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್