ಎಸ್.ಎಂ.‌ ಪ್ರಕಾಶಶಾಸ್ತ್ರಿ ಅವರಿಗೆ ವೀರಶೈವ ಆಗಮದ ರಜತ ಪದಕ
ಎಸ್.ಎಂ.‌ ಪ್ರಕಾಶಶಾಸ್ತ್ರಿ ಅವರಿಗೆ ವೀರಶೈವ ಆಗಮದ ರಜತ ಪದಕ
ಎಸ್.ಎಂ.‌ ಪ್ರಕಾಶಶಾಸ್ತ್ರಿ ಅವರಿಗೆ ವೀರಶೈವ ಆಗಮದ ರಜತ ಪದಕ

ಎಸ್.ಎಂ.‌ ಪ್ರಕಾಶಶಾಸ್ತ್ರಿ ಅವರಿಗೆ ವೀರಶೈವ ಆಗಮದ ರಜತ ಪದಕ

ಬೆಂಗಳೂರು, 20 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ ಇಲಖೆ) ಅಡಿಯಲ್ಲಿ ನಡೆದ ಆಗಮ, ವೀರಶೈವ ಆಗಮ, ಪ್ರವರ ಮತ್ತು ಪ್ರವೀಣ ಪರೀಕ್ಷೆಯಲ್ಲಿ ಬಳ್ಳಾರಿಯ ಎಸ್.ಎಂ. ಪ್ರಕಾಶ ಶಾಸ್ರಿ ಅವರು ರಜತ ಪದಕ‌ ಪುರಸ್ಕೃತರಾಗಿದ್ದಾರೆ.

ಬೆಂಗಳೂರು ಮಹಾನಗರದ ಬಸವನಗುಡಿಯ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವಾಗಮ ಘಟಿಕೋತ್ಸವದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಮುಜರಾಯಿ ಇಲಾಖೆಯ ಆಯುಕ್ತರಾದ ಎಂ.ವಿ. ವೆಂಕಟೇಶ್ ಅವರು ಎಸ್.ಎಂ‌. ಪ್ರಕಾಶ್ ಶಾಸ್ತ್ರಿ ಅವರಿಗೆ ಪ್ರಶಸ್ತಿ ಯನ್ನು ಪ್ರದಾನ ಮಾಡಿದರು.

ಸರ್ವಾಗಮ ಘಟಿಕೋತ್ಸವದಲ್ಲಿ ಪ್ರವರ ಮತ್ತು ಪ್ರವೀಣ ರಜತ ಪದಕ ಪುರಸ್ಕೃತರಾಗಿರುವ ಶಾನವಾಸಪುರದ ಎಸ್.ಎಂ. ಪ್ರಕಾಶಶಾಸ್ತ್ರಿ ಅವರಿಗೆ ವೀರಶೈವ ಅರ್ಚಕ - ಪುರೋಹಿತ ಸಂಘದ ಸರ್ವ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ

 rajesh pande