ರಾಯಚೂರು, 20 ಜುಲೈ (ಹಿ.ಸ.) :
ಆ್ಯಂಕರ್ : ಮಕ್ಕಳಲ್ಲಿ ಸೃಜನಶೀಲ ಅನ್ವೇಷಣೆಗಳಿಗೆ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ರಾಯಚೂರಿನಲ್ಲಿ ಬಾಲ ಭವನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ ಸಚಿವರಾದ ಎನ್ ಎಸ್ ಬೋಸರಾಜು ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಚರ್ಚಿಸಿದರು.
ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ, ಇಲಾಖೆಯ ಕಾರ್ಯವೈಕರಿಯನ್ನು ಪರಿಶೀಲಿಸಿ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ನವೀನ್ ಕುಮಾರ ಅವರೊಂದಿಗೆ ಇಲಾಖೆ ಪ್ರಗತಿ ಹಾಗೂ ಬಾಲ ಭವನದ ಕುರಿತು ಮಾಹಿತಿ ಪಡೆದರು.
ಬಾಲ ಭವನ ನಿರ್ಮಾಣದಿಂದ ಮಕ್ಕಳ ಕಲಿಕೆಗೆ ಹಾಗೂ ಗಳಿಕೆಗೆ ಅನುಕೂಲವಾಗಲಿದೆ ಎಂದು ಉಪ ನಿರ್ದೇಶಕರು ಸಚಿವ ಎನ್ಎಸ್ ಬೋಸರಾಜು ಅವರಿಗೆ ಮಾಹಿತಿ ನೀಡಿದ ಮೇರೆಗೆ ಸಚಿವರು ಸ್ಥಳದಲ್ಲಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಮಾತನಾಡಿ ಬಾಲ ಭವನ ನಿರ್ಮಾಣದ ಕುರಿತು ಚರ್ಚಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದ ಮಹಾನಗರ ಪಾಲಿಕೆ ಪ್ರಭಾರಿ ಮಹಾ ಪೌರರಾದ ಸಾಜಿದ್ ಸಮೀರ್, ಕಾಂಗ್ರೆಸ್ ಮುಖಂಡತಾದ ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ದಾನನಗೌಡ ಸಿರವಾರ, ಬಸವರಾಜ ಪಾಟೀಲ್ ಅತ್ತನೂರು, ರಮೇಶ್,ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳು ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಮಾನ್ವಿ,
ಮನ್ಸೂರ್ ಅಹ್ಮದ್, ವೆಂಕಟೇಶ್ ದೇಸಾಯಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್