ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ
ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ
ಚಿತ್ರ - ಕೋಲಾರ ತಾಲ್ಲೂಕು ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಬಗ್ಗೆ ನಡೆದ ಸಭೆಯಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಭಾಗಿಯಾಗಿದ್ದರು.


ಕೋಲಾರ, ೧೯ ಜುಲೈ (ಹಿ.ಸ.) :

ಆ್ಯಂಕರ್ : ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ತಮ್ಮ ವಾರ್ಡ್ ಗಳ ಅಭ್ಯರ್ಥಿಯ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇವೆ ಆಯ್ಕೆ ನೀವು ಮಾಡಿ ಕೆಲಸವನ್ನು ಒಗ್ಗೂಡಿಸಿಕೊಂಡು ಮಾಡೋಣ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ ವಾರ್ಡ್ ವಾರು ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿಮ್ಮ ಭಾಗದಲ್ಲಿರುವ ಹಳ್ಳಿ, ಗ್ರಾಮ, ಪಟ್ಟಣಗಳು ಅಭಿವೃದ್ಧಿ ಆಗಬೇಕಂದರೆ ಈ ಚುನಾವಣೆ ಮಹತ್ವವನ್ನು ಪಡೆದಿದೆ ಹಿಂದಿನ ಕಾಲದಲ್ಲಿ ಚುನಾವಣೆ ಬಂದರೆ ಗ್ರಾಮದಲ್ಲಿ ಹಿರಿಯರು ದೇವಾಲಯ, ಹಳ್ಳಿ ಕಟ್ಟೆ, ಎಲ್ಲೋ ಒಂದು ಭಾಗದಲ್ಲಿ ಕುಳಿತುಕೊಂಡು ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತಿದ್ದರು. ಆದರೆ ಇದೀಗ ರಾಜಕೀಯದಲ್ಲಿ ಅಂತಹ ಸನ್ನಿವೇಶಗಳು ಇಲ್ಲ. ಆಗಾಗಿ ನಮ್ಮ ಕಾಂಗ್ರೆಸ್ ಪಕ್ಷದಿಂದ ನಿಮ್ಮ ಗ್ರಾಮಕ್ಕೆ, ನಿಮ್ಮ ಮನಗೆ ಬಂದಿದ್ದೆವೆ, ನಿಮ್ಮ ಆಯ್ಕೆಯೇ ನಮ್ಮ ಆಯ್ಕೆಯಾಗಿದೆ ಎಂದರು.

ಪ್ರತಿಯೊಂದು ಚುನಾವಣೆಯಲ್ಲಿ ಯಾರು ಇದ್ದರೆ ಸೂಕ್ತ ಎಂದು ಮತದಾರರೇ ನಿರ್ಧಾರ ಮಾಡೋರು ತಮ್ಮ ವಾರ್ಡ್ ಗೆ ಬೇಕಾದ ಸೂಕ್ತ ಅಭ್ಯರ್ಥಿಯನ್ನು ತಾವೇ ಆಯ್ಕೆ ಮಾಡುವ ಉದ್ದೇಶದಿಂದ ೧೭ ವಾರ್ಡ್ ಗಳಲ್ಲಿ ಸಂಚಾರ ಮಾಡುತ್ತಿದ್ದೆವೆ ಅಭ್ಯರ್ಥಿಯನ್ನು ನೀವೆ ವಾರ್ಡ್ ನಲ್ಲಿ ಕುಳಿತುಕೊಂಡು ನೀವೆ ಆಯ್ಕೆ ಮಾಡಿ, ನಿಮ್ಮ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿರುತ್ತೆವೆ ಎಂದರು.

ರಾಜಕೀಯ ತುಂಬಾ ಹದಗೆಟ್ಟಿದೆ. ವ್ಯಾಪಾರಗಳಾಗಿದೆ. ಅಭ್ಯರ್ಥಿ ಆಗುವವರು ಯಾರೇ ಆಗಲಿ ಪ್ರೀತಿಯಿಂದ ಜನರ ಮನಸ್ಸನ್ನು ಗೆಲ್ಲಬೇಕು ಅನಿಟ್ಟಿನಲ್ಲಿ ಚುನಾವಣೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ವೇಮಗಲ್ ಕುರುಗಲ್ ಮೊದಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತರಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಶಾಸಕ ಕೊತ್ತೂರು ಮಂಜುನಾಥ್ ಕೆಲಸ ಮಾಡಿಕೊಂಡು ಬಂದಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಇಲ್ಲಿ ಇನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಾಗಿರುವ ಹಿನ್ನಲೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ನೀಡಿ ನಡೆದುಕೊಂಡಿದೆ ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳನ್ನು ಮುಟ್ಟದ ಮನೆಯಲ್ಲಿ ಎಂದು ತಾಜಾ ಉದಾಹರಣೆಯಾಗಿದೆ ಎಂದರು.

ವೇಮಗಲ್ ನಿಂದ ಸೀತಿ ವರೆಗೆ ೮ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಆಗಿದೆ. ಅದಷ್ಟು ಬೇಗನೆ ಎಲ್ಲಾ ಕಾಮಗಾರಿಗಳಿಗೂ ಕಾರ್ಯರೂಪಕ್ಕೆ ಬರಲಿದೆ ಅದೇ ರೀತಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ಬಹಳ ಕಾಲದ ಅಪೇಕ್ಷೆಯಿಂದ ಈ ಭಾಗದ ಗ್ರಾಮಗಳು ವೇಮಗಲ್ ಗೆ ಸೇರಿಸಲಾಗಿದೆ ಈಗಾಗಲೇ ಬಹ ದೊಡ್ಡ ಪ್ರಮಾಣದಲ್ಲಿ ರಸ್ತೆ ಆಗಲಿದೆ. ಈಗಾಗಲೇ ವೇಮಗಲ್ ಕುರುಗಲ್ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ತಮ್ಮ ಮುಂದೆಯೇ ಕಾಣುತ್ತಿದೆ. ಗೌರವಯುತವಾಗಿ ಬದುಕಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರವರ ಸರ್ಕಾರ ಜನರ ಮನ ಗೆದ್ದಿದೆ ,ತಮ್ಮ ವಾರ್ಡ್ ಗಳಲ್ಲಿರುವ ಅಭ್ಯರ್ಥಿಗಳು ಈ ತಿಂಗಳ ೨೮ ರ ತನಕ ಶಾಸಕರ ಬಳಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು, ಆಕಾಂಕ್ಷೆಗಳು ಏನೆಲ್ಲ ದಾಖಲೆಗಳು ಸಿದ್ದತೆಗೊಳಿಸಿಕೊಳ್ಳಬೇಕು ನಮ್ಮ ನಮ್ಮ ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆಗಲಿ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ, ಪಕ್ಷದ ಪರ ಕೆಲಸ ಮಾಡಬೇಕು ಎಂದು ಆಕಾಂಕ್ಷಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲಗೌಡ,, ಉದಯ್ ಶಂಕರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಬೆಟ್ಟಹೊಸಪುರ ಜಗನ್ನಾಥ್, ಕಲ್ವ ಶ್ರೀರಾಮಪ್ಪ, ಮೈಲಾಂಡಹಳ್ಳಿ ಮುರಳಿ, ಪುರಹಳ್ಳಿ ಗಣೇಶ್, ನಂಜುಂಡಪ್ಪ, ಕುರುಬರಹಳ್ಳಿ ಮೂರ್ತಿ, ಪಿಳ್ಳಪ್ಪ, ಪೈನಾನ್ಸ್ ರಾಜಣ್ಣ, ಬಾಬಣ್ಣ, ವೆಂಕಟೇಶ್ ಗೌಡ, ಮೇಡಿಹಾಳ ಮುನಿಆಂಜಿನಪ್ಪ, ಬೀಮಣ್ಣನವರ ಮಂಜುನಾಥ್, , ಸಿಎಂಎಂ ಮಂಜುನಾಥ್, ವೀರೇಂದ್ರ ಪಾಟೀಲ್, ಮುಂತಾದವರು ಇದ್ದರು.

ಚಿತ್ರ - ಕೋಲಾರ ತಾಲ್ಲೂಕು ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಬಗ್ಗೆ ನಡೆದ ಸಭೆಯಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಭಾಗಿಯಾಗಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande