ಕೊಪ್ಪಳ, 08 ಜೂನ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ-1, ಇಂಗ್ಲೀಷ್-2, ಗಣಿತ-1, ವಿಜ್ಞಾನ-1, ಗಣಕವಿಜ್ಞಾನ-2 ಹುದ್ದೆಗಳು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಹಾಗೂ ಗಣಕ ವಿಜ್ಞಾನ ವಿಷಯಗಳಲ್ಲಿ ತಲಾ 1 ಹುದ್ದೆಯನ್ನು ನೇಮಕ ಮಾಡಿಕೊಳ್ಳಲಾಗುವುದು.
ಭಾಷಾ ವಿಷಯಗಳಿಗೆ ಬಿಎ.ಬಿಎಡ್/ಎಂಎ.ಬಿಎಡ್, ಕೋರ್ ವಿಷಯಗಳಿಗೆ ಬಿಎಸ್‍ಸಿ.ಬಿಎಡ್/ಎಂಎಸ್‍ಸಿ.ಬಿಎಡ್, ಗಣಕ ವಿಜ್ಞಾನ ವಿಷಯಕ್ಕೆ ಬಿಸಿಎ/ಬಿಎಸ್‍ಸಿ ಕಂಪ್ಯೂಟರ್ ಸೈನ್ಸ್/ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್/ಎಂಸಿಎ/ಬಿಇ ಕಂಪ್ಯೂಟರ್ ಸೈನ್ಸ್/ಬಿಇ ಇನ್ಫಾರ್ಮೇಶನ್ ಸೈನ್ಸ್, ಭೌತಶಾಸ್ತ್ರ ವಿಷಯಕ್ಕೆ ಎಂಎಸ್‍ಸಿ/ಎಂಎಸ್‍ಸಿ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಬಾಲಕಿಯರ ವಸತಿ ಶಾಲೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಎಲ್ಲಾ ಶಿಕ್ಷಕ ಹುದ್ದೆಗೆ ಟಿಇಟಿ ಕಡ್ಡಾಯವಾಗಿದೆ. ಮೆರಿಟ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಹ ಅಭ್ಯರ್ಥಿಗಳು ಜೂನ್ 12 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಖಾಲಿ ಹುದ್ದೆ ಇರುವ ಶಾಲೆ, ಕಾಲೇಜು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮನ್ವಯಾಧಿಕಾರಿ ಮೊ.ಸಂ.7026884063 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್