ಚುನಾವಣಾ ಆಯೋಗದ ಭೇಟಿಗೆ ಕಾಂಗ್ರೆಸ್ ಷರತ್ತು
ನವದೆಹಲಿ, 26 ಜೂನ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಡಿಜಿಟಲ್ ಮತದಾರರ ಪಟ್ಟಿ ಹಾಗೂ ಮತದಾನ ದಿನದ ವೀಡಿಯೊ ದೃಶ್ಯಾವಳಿ ಒದಗಿಸುವಂತೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಈಡೇರಿಸಿದ ನಂತರ ಮಾತ್ರ ಆಯೋಗವನ್ನು ಭೇಟಿ ಮ
Cong


ನವದೆಹಲಿ, 26 ಜೂನ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಡಿಜಿಟಲ್ ಮತದಾರರ ಪಟ್ಟಿ ಹಾಗೂ ಮತದಾನ ದಿನದ ವೀಡಿಯೊ ದೃಶ್ಯಾವಳಿ ಒದಗಿಸುವಂತೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಈಡೇರಿಸಿದ ನಂತರ ಮಾತ್ರ ಆಯೋಗವನ್ನು ಭೇಟಿ ಮಾಡುತ್ತೇವೆ ಎಂಬ ಷರತ್ತನ್ನು ಕಾಂಗ್ರೆಸ್ ವಿಧಿಸಿದೆ.

ಈಗಲ್ ಹೆಸರಿನ ತಜ್ಞರ ತಂಡದ ವತಿಯಿಂದ ರಚಿಸಲಾದ ಪತ್ರದಲ್ಲಿ, ಮಹಾರಾಷ್ಟ್ರದ ಅಂತಿಮ ಮತದಾರರ ಪಟ್ಟಿಯ ಯಂತ್ರ ಓದಬಹುದಾದ ಪ್ರತಿ ಹಾಗೂ ಮತದಾನ ದಿನದ ದೃಶ್ಯಾವಳಿ ತುರ್ತಾಗಿ ಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಹೇಳಿರುವಂತೆ, ಈ ಮಾಹಿತಿಗಳು ಪಕ್ಷದ ವಿಶ್ಲೇಷಣೆಗೆ ಅತ್ಯಗತ್ಯವಾಗಿವೆ.

ಆಯೋಗ ಈಗಾಗಲೇ ಎಲ್ಲಾ ಪಕ್ಷಗಳಿಗೆ ಮತದಾರರ ಪಟ್ಟಿ ಸಕಾಲದಲ್ಲಿ ಲಭ್ಯವಾಗುವಂತೆ ಕ್ರಮ ತೆಗೆದುಕೊಂಡಿದ್ದು, ವೀಡಿಯೊ ತುಣುಕನ್ನು ನೀಡುವ ವಿಚಾರವು ಮತದಾನದ ಗೌಪ್ಯತೆ ಉಲ್ಲಂಘನೆಗೆ ಕಾರಣವಾಗಬಹುದು ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಬಗ್ಗೆ ಉಲ್ಲೇಖಿಸಿದೆ.

ಮಹಾರಾಷ್ಟ್ರದಲ್ಲಿ ನಡೆದ ಇತ್ತೀಚಿನ ಚುನಾವಣೆಗಳಲ್ಲಿ ಮತದಾರರ ಸಂಖ್ಯೆ ಅಸಾಮಾನ್ಯವಾಗಿ ಹೆಚ್ಚಳವಾಗಿದ್ದು, ಇದರ ಬಗ್ಗೆ ಸ್ಪಷ್ಟತೆ ಅಗತ್ಯವಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande