ಆಕ್ಸಿಯಮ್-4 ಉಡಾವಣೆ ಮುಂದೂಡಿಕೆ
ನವದೆಹಲಿ, 20 ಜೂನ್ (ಹಿ.ಸ.) : ಆ್ಯಂಕರ್ : ಆಕ್ಸಿಯಮ್ ಮಿಷನ್–4 ಬಾಹ್ಯಾಕಾಶ ಯಾನದ ಉಡಾವಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಬಾಹ್ಯಾಕಾಶ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಜೂನ್ 22 ರಂದು ಉಡಾವಣೆಗೊಳ್ಳಬೇಕಿದ್ದ ಈ ಮಿಷನ್ ಹೊಸ ದಿನಾಂಕದಲ್ಲಿ ನಡೆಯಲಿದೆ. ಅಮೆರಿಕದ ಖಾಸಗಿ ಸಂ
ಆಕ್ಸಿಯಮ್-4 ಉಡಾವಣೆ ಮುಂದೂಡಿಕೆ


ನವದೆಹಲಿ, 20 ಜೂನ್ (ಹಿ.ಸ.) :

ಆ್ಯಂಕರ್ : ಆಕ್ಸಿಯಮ್ ಮಿಷನ್–4 ಬಾಹ್ಯಾಕಾಶ ಯಾನದ ಉಡಾವಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಬಾಹ್ಯಾಕಾಶ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಜೂನ್ 22 ರಂದು ಉಡಾವಣೆಗೊಳ್ಳಬೇಕಿದ್ದ ಈ ಮಿಷನ್ ಹೊಸ ದಿನಾಂಕದಲ್ಲಿ ನಡೆಯಲಿದೆ.

ಅಮೆರಿಕದ ಖಾಸಗಿ ಸಂಸ್ಥೆ ಆಕ್ಸಿಯಮ್ ಸ್ಪೇಸ್ ಈ ಮಿಷನ್ ನಿಟ್ಟಿನಲ್ಲಿ ನಾಸಾ ಸಹಯೋಗದೊಂದಿಗೆ ಬಾಹ್ಯಾಕಾಶ ಪ್ರಯಾಣದ ಆಯೋಜನೆ ಮಾಡುತ್ತಿದೆ. ಈ ಮಿಷನ್‍ನಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೂಡ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande