ಬೆಂಗಳೂರು ವಿಮಾನ ನಿಲ್ದಾಣದಲ್ಲಿ 61 ಇಂಡಿಗೋ ವಿಮಾನ ಹಾರಾಟ ರದ್ದು
ಬೆಂಗಳೂರು, 07 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇಂಡಿಗೋ ವಿಮಾನಗಳ ಹಾರಾಟದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾದ ವ್ಯತ್ಯಯ ಮುಂದುವರೆದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಹಾರಾಟ ನಡೆಸಬೇಕಿದ್ದ 61 ಇಂಡಿಗೋ ವಿಮಾನಗಳು ರದ್ದುಗೊಂಡಿವೆ. ಇಂಡಿಗೋ ಸಂಸ್ಥೆ ಪ್ರಯಾಣ
Indigo


ಬೆಂಗಳೂರು, 07 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಂಡಿಗೋ ವಿಮಾನಗಳ ಹಾರಾಟದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾದ ವ್ಯತ್ಯಯ ಮುಂದುವರೆದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಹಾರಾಟ ನಡೆಸಬೇಕಿದ್ದ 61 ಇಂಡಿಗೋ ವಿಮಾನಗಳು ರದ್ದುಗೊಂಡಿವೆ.

ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ಸಂದೇಶ ಕಳುಹಿಸಿ, ತನ್ನ ತಮ್ಮ ವಿಮಾನಗಳು ಇಂದು ಕಾರ್ಯಾಚರಣೆ ನಡೆಸುವುದಿಲ್ಲವೆಂದು ತಿಳಿಸಿದ್ದು, ದೆಹಲಿ, ಹೈದರಾಬಾದ್, ಇಂದೋರ್, ರಾಯ್ಪುರ್, ಕೊಲ್ಕತ್ತಾ, ಮಂಗಳೂರು, ಕೊಚ್ಚಿ, ಶ್ರೀನಗರ, ಭೋಪಾಲ್ ಸೇರಿದಂತೆ ಹಲವು ಮಾರ್ಗಗಳಿಗೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ.

ಹಾರಾಟ ರದ್ದುಗೊಂಡ ಬಗ್ಗೆ ಕಂಪನಿಯು ಮುಂಚಿತ ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಇಂಡಿಗೋ ಕೌಂಟರ್ ಎದುರು ಪ್ರಯಾಣಿಕರ ಜನಸಂದಣಿ ಕಡಿಮೆಯಾಗಿದೆ. ಆಡಳಿತ ಮಂಡಳಿ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದ ವಿಮಾನ ನಿಲ್ದಾಣದ ಜನದಟ್ಟಣೆ ಸಹ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಇಂಡಿಗೋ ವಿಮಾನಗಳ ವಿಳಂಬ ಮುಂದುವರಿದಿರುವುದರಿಂದ, ಪ್ರಯಾಣಿಕರು ನಿಲ್ದಾಣದಲ್ಲಿ ಕಾದು ಕುಳಿತಿರುವ ದೃಶ್ಯಗಳು ಕಂಡುಬರುತ್ತಿವೆ. ಗೊಂದಲ ಕಡಿಮೆ ಮಾಡುವ ಉದ್ದೇಶದಿಂದ ಏರ್‌ಪೋರ್ಟ್ ಆಡಳಿತವು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಪ್ರಯಾಣಿಕರಿಗೆ ನಿರಂತರವಾಗಿ ಹಾರಾಟ ಸಂಬಂಧಿತ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಪ್ರಯಾಣಿಕರಲ್ಲಿ ಉಂಟಾಗುತ್ತಿದ್ದ ಆತಂಕ ಮತ್ತು ಗೊಂದಲಗಳು ಬಹುತೇಕ ಕಡಿಮೆಯಾಗಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande